ಶ್ರೀರೆಡ್ಡಿ ಮೇಲೆ ಕಾಲಿವುಡ್ ನಟ ಕಾರ್ತಿ ಈ ಪರಿ ಯಾಕೆ ಸಿಟ್ಟಾಗಿದ್ದು?

ಶನಿವಾರ, 21 ಜುಲೈ 2018 (06:56 IST)
ಹೈದರಾಬಾದ್ : ಹಲವು ನಟರು, ನಿರ್ದೇಶಕರು ಹಾಗೂ ನಿರ್ಮಾಪಕರ ಮೇಲೆ ಆರೋಪ ಮಾಡುತ್ತಿರುವ ಟಾಲಿವುಡ್ ನಟಿ ಶ್ರೀರೆಡ್ಡಿ ಅವರ ಮೇಲೆ ಕಾಲಿವುಡ್ ನಟ ಕಾರ್ತಿ ಅವರು ಕಿಡಿಕಾರಿದ್ದಾರೆ.


ಹೌದು. ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡುವುದರ ಮೂಲಕ ಸುದ್ದಿಯಾಗಿರುವ ನಟಿ ಶ್ರೀರೆಡ್ಡಿ ಅವರು ಅಂದಿನಿಂದ ಹಲವು ನಟರು, ನಿರ್ದೇಶಕರು ಹಾಗೂ ನಿರ್ಮಾಪಕ ಮೇಲೆ ನಾನಾ ತರಹದ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಕೆಲವರು ಪ್ರಚಾರಕ್ಕಾಗಿ ಶ್ರೀರೆಡ್ಡಿ ಈ ರೀತಿ ಮಾಡುತ್ತಿದ್ದಾರೆ ಎಂದು ಕೂಡ ಟೀಕಿಸಿದ್ದಾರೆ.


ಆದರೆ ದಿನದಿಂದ ದಿನಕ್ಕೆ ಶ್ರೀರೆಡ್ಡಿಯ ಉಪಟಳ ಹೆಚ್ಚುತ್ತಿರುವುದನ್ನು ಕಂಡು ಕಾಲಿವುಡ್ ನಟ ಕಾರ್ತಿ ಅವರು ಆಕೆಗೆ ಸಲಹೆಯೊಂದನ್ನು ನೀಡಿದ್ದಾರೆ. ಮಾಧ್ಯಮಗಳೊಂದಿಗೆ  ಮಾತನಾಡಿರುವ ಕಾರ್ತಿ, ‘ಅವರದು ಆಧಾರವಿಲ್ಲದ ಆರೋಪಗಳು. ನಿಜವಾಗಿಯೂ ಅವರಿಗೆ ಅನ್ಯಾಯವಾಗಿದ್ದರೆ ಕಾನೂನಿನ ಹೋರಾಟ ನಡೆಸಲಿ. ಸಾಕ್ಷಿಗಳ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ. ಅದನ್ನು ಬಿಟ್ಟು ಹೀಗೆ ಬೀದಿಯಲ್ಲಿ ರಂಪಾಟ ಮಾಡೋದು ಸರಿಯಲ್ಲ’ ಎಂದು ಕಿಡಿ ಕಾರಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸನ್ನಿ ಲಿಯೋನ್ ಮೊದಲ ಬಾರಿಗೆ ಬ್ಲೂ ಫಿಲ್ಮ್ ನೋಡಿ ಮಾಡಿದ್ದೇನು ಗೊತ್ತಾ?