Select Your Language

Notifications

webdunia
webdunia
webdunia
webdunia

ಸೋಶಿಯಲ್ ಮಿಡಿಯಾದಲ್ಲಿ ನಟ ಪ್ರಭಾಸ್ ಗೆ ಅವಮಾನ ಮಾಡಿದ್ರಾ ನಟ ಸಿದ್ಧಾರ್ಥ?

ಸೋಶಿಯಲ್ ಮಿಡಿಯಾದಲ್ಲಿ ನಟ ಪ್ರಭಾಸ್ ಗೆ ಅವಮಾನ ಮಾಡಿದ್ರಾ ನಟ ಸಿದ್ಧಾರ್ಥ?
ಹೈದರಾಬಾದ್ , ಗುರುವಾರ, 19 ಜುಲೈ 2018 (07:24 IST)
ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರಿಗೆ ಕಾಲಿವುಡ್​ ನಟ ಸಿದ್ಧಾರ್ಥ ಅವರು ಟ್ವೀಟ್ವೊಂದರ ಮೂಲಕ ಅವಮಾನ ಮಾಡಿ ಪ್ರಭಾಸ್ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಹಾಗಾದ್ರೆ ಆಗಿದ್ದೇನು ಗೊತ್ತಾ? ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್​ ಅವರ ಹುಟ್ಟುಹಬ್ಬ ಅಕ್ಟೋಬರ್​ 23 ರಂದು ನಡೆಯಲಿದ್ದು ಇದರ ಭಾಗವಾಗಿ ರಮೇಶ್ ಬಾಲಾ 'ಕೌಂಟ್​ ಡೌನ್​ ಪ್ರಾರಂಭ, ಪ್ರಭಾಸ್​ ಬರ್ತ್​ ಡೇಗೆ 100 ದಿನ ಬಾಕಿ' ಎನ್ನುವ ಹ್ಯಾಷ್​ಟ್ಯಾಗ್​ ಹಾಕಿ ಟ್ವಿಟ್​ ಮಾಡಿದ್ದರು.


ಬಾಲಾ​ ಅವರ ಈ ಟ್ವಿಟ್​ಗೆ ತಮಾಷೆಗಾಗಿ ನಟ ಸಿದ್ದಾರ್ಥ್ ಅವರು ಪ್ರಭಾಸ್​ ಅವರ ಮುಂದಿನ ಹುಟ್ಟುಹಬ್ಬಕ್ಕೆ 465 ದಿನ ಬಾಕಿ ಉಳಿದಿದೆ ಎಂದು ಅಪಹಾಸ್ಯದ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಬಳಿಕ ಸ್ವಲ್ಪ ವಿವೇಚನೆಯಿಂದ ಟ್ವಿಟ್​ ಮಾಡಿ ಎಂದು ಸಲಹೆ ಕೂಡ ನೀಡಿದ್ದಾರೆ. 


ನಟ ಸಿದ್ದಾರ್ಥ್ ಅವರು ನಟ ಪ್ರಭಾಸ್ ಅವರ ವಿಷಯದಲ್ಲಿ ಈ ರೀತಿ ಟ್ವೀಟ್ ಮಾಡಿದ್ದು ಪ್ರಭಾಸ್ ಅಭಿಮಾನಿಗಳಿಗೆ ಇಷ್ಟವಾಗದ ಕಾರಣ  ನಟ ಸಿದ್ದಾರ್ಥ್ ಅವರ ಮೇಲೆ ಕೋಪಿಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಮುಮ್ಮಟ್ಟಿ ಯುವತಿಯಾಗಿದ್ದರೆ ಇವರು ಅವರನ್ನು ರೇಪ್ ಮಾಡುತ್ತಿದ್ದರಂತೆ!