Publish Date: Sat, 14 Jul 2018 (07:20 IST)
Updated Date: Sat, 14 Jul 2018 (07:25 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ಬಗ್ಗೆ ವಿರೋಧ ವ್ಯಕ್ತಪಡಿಸಿ ಟಾಲಿವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ ತೆಲುಗು ನಟಿ ಶ್ರೀರೆಡ್ಡಿ ಅವರು ತಮ್ಮನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿರುವ ಹಲವಾರು ಟಾಲಿವುಡ್ ನಟರ ಹೆಸರನ್ನು ಬಹಿರಂಗಪಡಿಸಿದ್ದರು. ಆದರೆ ಇದೀಗ ತಮಿಳು ನಟರೊಬ್ಬರ ಮೇಲೆ ಆರೋಪ ಮಾಡಿದ್ದಾರೆ.
ತಮಿಳು ನಟ ಶ್ರೀಕಾಂತ್ ಅವರು ನನಗೆ ಅವಕಾಶ ಕೊಡಿಸುವುದಾಗಿ ನಂಬಿಸಿ ನನಗೆ ವಂಚಿಸಿದ್ದಾರೆ ಎಂದು ನಟಿ ಶ್ರೀರೆಡ್ಡಿ ಅವರು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಕಾಲಿವುಡ್ ಚಿತ್ರರಂಗವನ್ನು ದಿಗ್ಭ್ರಮೆಗೊಳಿಸಿದ್ದಾರೆ.
ನಟ ಶ್ರೀಕಾಂತ್ ಅವರ ಫೋಟೋ ಅಪ್ ಲೌಡ್ ಮಾಡಿರುವ ನಟಿ ಶ್ರೀರೆಡ್ಡಿ ಅವರು ‘ಬಹುಶಃ ಐದು ವರ್ಷಗಳ ಹಿಂದೆ, ಹೈದ್ರಾಬಾದ್ ನ ಪಾರ್ಕ್ ಹೋಟೆಲ್ ನಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಾರ್ಟಿ ನಿಮಗೆ ನೆನಪಿರಬಹುದು. ನಾನು ನೀವು ಒಟ್ಟಿಗೆ ಕ್ಲಬ್ ನಲ್ಲಿ ಡ್ಯಾನ್ಸ್ ಮಾಡುವಾಗ ನನಗೆ ಪಾತ್ರ ನೀಡುವುದಾಗಿ ಮಾತು ಕೊಟ್ಟಿದ್ರಿ. ನಿಮಗೆ ನೆನಪಿರಬಹುದು.?' ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ