ಆಸ್ಪತ್ರೆಗೆ ದಾಖಲಾದ ನಟ ಪವನ್ ಕಲ್ಯಾಣ

ಶುಕ್ರವಾರ, 13 ಜುಲೈ 2018 (11:57 IST)
ಹೈದರಾಬಾದ್ : ಜನಸೇನಾ ಪಕ್ಷದ ಸಂಸ್ಥಾಪಕ, ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಪವನ್ ಕಲ್ಯಾಣ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದ ಮಾತ್ರಕ್ಕೆ ಅವರ ಅಭಿಮಾನಿಗಳು ಆತಂಕಪಡಬೇಕಾಗಿಲ್ಲ. ಏಕೆಂದರೆ  ಅವರು ಆಸ್ಪತ್ರೆಗೆ ದಾಖಲಾಗಿದ್ದು, ಕಣ್ಣಿಗೆ ಚಿಕ್ಕ ಅಪರೇಷನ್​ ಮಾಡಿಕೊಳ್ಳುವ ಸಲುವಾಗಿ. ಹೌದು. ಕೆಲ ದಿನಗಳ ಹಿಂದೆ ಪವನ್​ಎಡಗಣ್ಣಿನ ಮೇಲೆ ಸಣ್ಣ ಗುಳ್ಳೆ ಕಾಣಿಸಿಕೊಂಡಿತ್ತು. ಅದಕ್ಕಾಗಿ ವೈದ್ಯರನ್ನು ಭೇಟಿ ಮಾಡಿದಾಗ ಕಣ್ಣಿಗೆ ಚಿಕ್ಕ ಅಪರೇಷನ್​ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.


ಆದ ಕಾರಣ  ಬುಧವಾರ ಸಂಜೆ ಪವನ್​ ಕಲ್ಯಾಣ ಅವರು ಹೈದರಾಬಾದ್​ನ ಎಲ್​.ವಿ. ಪ್ರಸಾದ್​ ಕಣ್ಣಿನ ಆಸ್ಪತ್ರೆಗೆ ದಾಖಲಾಗಿ ಗುರುವಾರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ನಂತರ ಗುರುವಾರ ಸಂಜೆಯೇ ​ ಅವರು  ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಎರಡು ದಿನಗಳ ಕಾಲ ಅವರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಟೋ ಓಡಿಸಿ ಸಾರ್ವಜನಿಕರಿಗೆ ಸಹಾಯ ಮಾಡಿದ ನಟ ಧ್ರುವ ಸರ್ಜಾ!