Select Your Language

Notifications

webdunia
webdunia
webdunia
webdunia

ಆಟೋ ಓಡಿಸಿ ಸಾರ್ವಜನಿಕರಿಗೆ ಸಹಾಯ ಮಾಡಿದ ನಟ ಧ್ರುವ ಸರ್ಜಾ!

ಆಟೋ ಓಡಿಸಿ ಸಾರ್ವಜನಿಕರಿಗೆ ಸಹಾಯ ಮಾಡಿದ ನಟ ಧ್ರುವ ಸರ್ಜಾ!
ಬೆಂಗಳೂರು , ಶುಕ್ರವಾರ, 13 ಜುಲೈ 2018 (09:54 IST)
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹಲವು ರೀತಿಯ ರಿಯಾಲಿಟಿ ಶೋಗಳು ಬರುತ್ತಿವೆ. ಆದರೆ ಉದಯ ಟಿವಿಯಲ್ಲಿ ನಾಳೆಯಿಂದ ಮೂಡಿ ಬರಲಿರುವ ಸದಾ ನಮ್ಮೊಂದಿಗೆ ಎನ್ನುವ ರಿಯಾಲಿಟಿ ಶೋ ಹೊಸತನದಿಂದ ಕೂಡಿದೆ.
 

ಚಿತ್ರ ತಾರೆಯರು ಸಾಮಾನ್ಯರಂತೆ ಅಟೋ ಓಡಿಸುವುದು, ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವುದು, ಅಂಗಡಿ ನೋಡಿಕೊಳ್ಳುವುದು ಇತ್ಯಾದಿ ಕೆಲಸಗಳನ್ನು ಮಾಡಿ ಕಷ್ಟದಲ್ಲಿರುವ ಜನ ಸಾಮಾನ್ಯರಿಗೆ ಸಹಾಯ ಮಾಡುವುದು ಈ ರಿಯಾಲಿಟಿ ಶೋ ಉದ್ದೇಶ.

webdunia
ಮೊದಲ ಸಂಚಿಕೆಯಲ್ಲಿ ನಟ ಧ್ರುವ ಸರ್ಜಾ ಅಟೋ ಓಡಿಸಿ ಹಣ ಕೂಡಿಸಿ ನರೇಂದ್ರ ಕುಮಾರ್ ಎಂಬವರಿಗೆ ಸಹಾಯ ಮಾಡಿದ್ದಾರೆ. ಭಾನುವಾರ ರಾತ್ರಿ 9 ಗಂಟೆಗೆ ಸದಾ ನಿಮ್ಮೊಂದಿಗೆ ಶೋನಲ್ಲಿ ಈ ದೃಶ್ಯಗಳನ್ನು ನೋಡಬಹುದಾಗಿದೆ. ಪಂಚಭಾಷಾ ತಾರೆ ಲಕ್ಷ್ಮಿ ಈ ಕಾರ್ಯಕ್ರಮದ ನಿರೂಪಕರಾಗಿರುತ್ತಾರೆ.

ಶನಿವಾರ ರಾತ್ರಿ 9 ಕ್ಕೆ ಸವಾಲ್ ಗೆ ಸೈ ಎನ್ನುವ ಮತ್ತೊಂದು ರಿಯಾಲಿಟಿ ಶೋ ಮೂಡಿಬರಲಿದ್ದು, ಇದರಲ್ಲಿ ಸಿನಿಮಾ ಮತ್ತು ಕಿರುತೆರೆಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಮನರಂಜನೆಯ ಕಾರ್ಯಕ್ರಮ ಇದಾಗಲಿದ್ದು, ಸವಾಲು ಜವಾಬುಗಳ ಮೋಜು ಇರಲಿದೆ. ಕಿರುತೆರೆಯಲ್ಲಿ ಖ್ಯಾತರಾಗಿರುವ ನಟಿ ನಿತ್ಯಾ ರಾಮ್ ಮತ್ತು ನಿರಂಜನ್ ದೇಶಪಾಂಡೆ ಈ ಕಾರ್ಯಕ್ರಮ ನಿರೂಪಿಸಲಿದ್ದಾರೆ.








ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

‘ಸಂಜು' ಸಿನಿಮಾದ ಬಗ್ಗೆ ಆರ್​ಎಸ್​ಎಸ್ ಬೇಸರಗೊಂಡಿದ್ಯಾಕೆ?