ಪಟ್ನಾ : ಅತ್ಯಾಚಾರ ಪ್ರಕರಣಗಳಿಗೆ ಪೋಷಕರು ಮತ್ತು ಸ್ಮಾರ್ಟ್‌ಫೋನ್‌ಗಳೇ ಕಾರಣ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ ಬಿಹಾರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಇದೀಗ ವೇಶ್ಯೆಯರು ಸರ್ಕಾರಿ ಅಧಿಕಾರಿಗಳಿಗಿಂತಲೂ ಉತ್ತಮರು ಎಂದು ಹೇಳುವುದರ ಮೂಲಕ ಮತ್ತೆ ಹೊಸ ವಿವಾದ ಸೃಷ್ಟಿಸಿದ್ದಾರೆ.
									
			
			 
 			
 
 			
			                     
							
							
			        							
								
																	
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುರೇಂದ್ರ ಸಿಂಗ್ ಅವರು, ‘ವೇಶ್ಯೆಯರು ಸರ್ಕಾರಿ ಅಧಿಕಾರಿಗಳಿಗಿಂತಲೂ ಉತ್ತಮರು. ಕಡೇಪಕ್ಷ ಅವರು ಹಣಕ್ಕಾಗಿ ಚೆನ್ನಾಗಿ ಕೆಲಸ ಮಾಡುತ್ತಾರೆ ಮತ್ತು ವೇದಿಕೆ ಮೇಲೆ ನರ್ತಿಸಿ ನಮಗೆ ಮನರಂಜನೆ ನೀಡುತ್ತಾರೆ. ಆದರೆ, ಈ ಅಧಿಕಾರಿಗಳು ಹಣ ತೆಗೆದುಕೊಂಡ ಬಳಿಕವೂ ಕೆಲಸ ಮಾಡಿಕೊಡುತ್ತಾರೆ ಎಂಬ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಹಾಗೇ ಅವರು ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳುವ ಅಧಿಕಾರಿಗಳನ್ನು ಹೊಡೆಯುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ.
									
										
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ