ತೆಲುಗು ಚಿತ್ರ ವಿಮರ್ಶಕ ಕತ್ತಿ ಮಹೇಶ್ ಅನ್ನು ಗಡಿಪಾರು ಮಾಡಲು ಕಾರಣವೇನು?

ಬುಧವಾರ, 11 ಜುಲೈ 2018 (14:56 IST)
ಹೈದರಾಬಾದ್ : ವಿವಾದಾತ್ಮಕ  ಹೇಳಿಕೆಗಳಿಂದಲೇ ಸುದ್ದಿಯಾಗಿರುವ ತೆಲುಗು ಚಿತ್ರ ವಿಮರ್ಶಕ ಕತ್ತಿ ಮಹೇಶ್  ಅವರನ್ನು ಹೈದರಾಬಾದ್ ನಿಂದ ಗಡಿಪಾರು ಮಾಡಲಾಗಿದೆ.


ಇತ್ತೀಚೆಗೆ ಶ್ರೀರಾಮ ಮತ್ತು ಸೀತೆ ಕುರಿತು ಅವಹೇಳನ ಹೇಳಿಕೆ ನೀಡಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದ್ದರು. ಆದ ಕಾರಣ ಇದೇ ಜುಲೈ 2 ರಂದು ಹೈದರಾಬಾದ್ ಪೊಲೀಸರು ಕತ್ತಿ ಮಹೇಶ್ ರನ್ನು ಬಂಧಿಸಿದ್ದರು.


ಇದೀಗ ಕತ್ತಿ ಮಹೇಶ್ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಕಾಪಾಡುವ ನಿಟ್ಟಿನಲ್ಲಿ ಅವರನ್ನು ಹೈದರಾಬಾದ್ ನಿಂದ 6 ತಿಂಗಳು ಗಡಿಪಾರು ಮಾಡಲಾಗಿದೆ. ಹೈದರಾಬಾದ್ ನಿಂದ ಆಂಧ್ರಪ್ರದೇಶ ಜಿಲ್ಲೆ ಚಿತ್ತೂರಿಗೆ ಸ್ಥಳಾಂತರಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೆಗಾಸ್ಟಾರ್‌ ‘ಸೈರಾ’ ಚಿತ್ರದಲ್ಲಿ ಸುದೀಪ್ ನಟಿಸುತ್ತಾರಾ? ಈ ಬಗ್ಗೆ ಸುದೀಪ್ ಹೇಳಿದ್ದೇನು?