Publish Date: Mon, 09 Jul 2018 (09:08 IST)
Updated Date: Mon, 09 Jul 2018 (09:09 IST)
ನವದೆಹಲಿ: ಆ ಶ್ರೀರಾಮಚಂದ್ರನೇ ಬಂದರೂ ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಸಾಧ್ಯವಾಗದು ಎಂದು ಬಿಜೆಪಿ ಸಂಸದ ಸುರೇಂದ್ರ ನಾರಾಯಣ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ಇದನ್ನು ನಾನು ಧೈರ್ಯವಾಗಿ ಹೇಳಬಲ್ಲೆ. ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಆ ಭಗವಂತ ಶ್ರೀರಾಮನಿಗೂ ಸಾಧ್ಯವಿಲ್ಲ. ಇದು ಪ್ರಾಕೃತಿಕ ಅಂಟು ಖಾಯಿಲೆಯಂತಾಗಿದೆ’ ಎಂದು ಸಂಸದ ಸುರೇಂದ್ರ ಹೇಳಿದ್ದಾರೆ.
ಇಂತಹ ಪ್ರಕರಣವನ್ನು ತಡೆಯಬೇಕಾದರೆ ಇನ್ನೊಬ್ಬರ ಕುಟುಂಬವನ್ನೂ ನಮ್ಮ ಕುಟುಂಬದಂತೆ ಗೌರವಿಸಲು ಜನರು ಕಲಿಯಬೇಕು. ಹಾಗಿದ್ದರೆ ಮಾತ್ರ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಬಹುದು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಹಿಂದೆಯೂ ಒಮ್ಮೆ ಇದೇ ಸಂಸದ ಸುರೇಂದ್ರ ಸಿಂಗ್ ಸರ್ಕಾರಿ ನೌಕರರು ವೇಶ್ಯೆಯರು ಎಂದು ವಿವಾದವೆಬ್ಬಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.