Select Your Language

Notifications

webdunia
webdunia
webdunia
webdunia

ಶ್ರೀರಾಮನಿಂದಲೂ ಅತ್ಯಾಚಾರ ಪ್ರಕರಣಗಳನ್ನ ತಡೆಯಲು ಸಾಧ್ಯವಿಲ್ಲ - ಶಾಸಕ ಸುರೇಂದ್ರ ನಾರಾಯಣ ಸಿಂಗ್

ಶ್ರೀರಾಮನಿಂದಲೂ ಅತ್ಯಾಚಾರ ಪ್ರಕರಣಗಳನ್ನ ತಡೆಯಲು ಸಾಧ್ಯವಿಲ್ಲ - ಶಾಸಕ ಸುರೇಂದ್ರ ನಾರಾಯಣ ಸಿಂಗ್
ಬಲಿಯಾ , ಭಾನುವಾರ, 8 ಜುಲೈ 2018 (12:27 IST)
ಬಲಿಯಾ : ಮರ್ಯಾದ ಪುರುಷ ಶ್ರೀರಾಮನಿಂದಲೂ ಅತ್ಯಾಚಾರ ಪ್ರಕರಣಗಳನ್ನ ತಡೆಯಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ ಸಿಂಗ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ದೇಶಾದ್ಯಂತ ಸಂಚಲನ ಮೂಡಿಸಿದ್ದ ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ ಸಿಂಗ್ ಅವರು ಈ ರೀತಿಯಾಗಿ ಹೇಳಿಕೆ ನೀಡಿದ್ದು, ಈ ಮೂಲಕ ವಿವಾದವನ್ನು ತನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.


‘ನಾನು ಆತ್ಮವಿಶ್ವಾಸದಿಂದ ಹೇಳುತ್ತೇನೆ. ದೇವರಾದ ಶ್ರೀರಾಮನಿಂದಲೂ ಅತ್ಯಾಚಾರಗಳನ್ನು ನಡೆಯುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಇದು ಸ್ವಾಭಾವಿಕ ಸಂಗತಿ, ಈಗ ಯಾರೂ ಅಸ್ಪೃಶ್ಯರಾಗಿ ಉಳಿದಿಲ್ಲ. ಎಲ್ಲರನ್ನೂ ತಮ್ಮ ಕುಟುಂಬಸ್ಥರು, ತನ್ನ ಸೋದರಿಯರು ಎಂದು ಭಾವಿಸುವುದು ಜನರ ಜವಾಬ್ದಾರಿಯಾಗಬೇಕು. ನಾವು ಮೌಲ್ಯಗಳ ಮೂಲಕ ಜನರನ್ನು ನಿಯಂತ್ರಿಸಬಹುದೇ ಹೊರತು ಸಂವಿಧಾನದಿಂದ ಅಲ್ಲ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತೃತೀಯ ರಂಗ ಹರಿದ ಬಟ್ಟೆಯಂತಾಗಿದೆ: ಡಿವಿ ಸದಾನಂದ ಗೌಡ ವಾಗ್ದಾಳಿ