Select Your Language

Notifications

webdunia
webdunia
webdunia
webdunia

ಇರ್ಫಾನ್ ಖಾನ್ ಅಭಿನಯದ ‘ಬ್ಲಾಕ್ ಮೇಲ್’ ಕುರಿತು ಅಮಿತಾಬ್ ಬಚ್ಚನ್ ಹೇಳಿದ್ದೇನು…?

ಇರ್ಫಾನ್ ಖಾನ್ ಅಭಿನಯದ ‘ಬ್ಲಾಕ್ ಮೇಲ್’ ಕುರಿತು ಅಮಿತಾಬ್ ಬಚ್ಚನ್ ಹೇಳಿದ್ದೇನು…?
ಮುಂಬೈ , ಸೋಮವಾರ, 9 ಏಪ್ರಿಲ್ 2018 (06:47 IST)
ಮುಂಬೈ : ಬಾಲಿವುಡ್ ನಟ ಇರ್ಫಾನ್ ಖಾನ್ ಅಭಿನಯದ ‘ಬ್ಲಾಕ್ ಮೇಲ್’ ಈಗಾಗಲೇ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕೂಡ ಕಾಣುತ್ತಿದೆ.

ನಟ ಇರ್ಫಾನ್ ಖಾನ್ ಅವರು ನ್ಯೂರೊಎಂಡ್ರೊಕ್ರೈನ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ತಮ್ಮ ಚಿತ್ರದ ಪ್ರಚಾರಕ್ಕೂ ಕೂಡ ಬರಲು ಸಾಧ್ಯವಾಗಲಿಲ್ಲ. ಆದರೂ ಕೂಡ  ಅವರ ‘ಬ್ಲಾಕ್ ಮೇಲ್’ ಚಿತ್ರ ಬಿಡುಗಡೆಗೊಂಡು ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅಷ್ಟೇ ಅಲ್ಲದೇ ಬಾಲಿವುಡ್ ಸ್ಟಾರ್ ನಟರು ಕೂಡ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ, ಇನ್ನೂ  ಸಿನಿಮಾ ನೋಡಿದ ಅಮಿತಾಬ್ ಬಚ್ಚನ್ ಅವರು  'ಈ ದಿನ ಒಂದು ಒಳ್ಳೆಯ ಸಿನಿಮಾ ನೋಡಿದೆ. ಕಥೆ, ಚಿತ್ರಕಥೆ,ನಿರೂಪಣೆ, ಪ್ರತಿಯೊಂದು ಕೂಡ ಬಹಳ ಚೆನ್ನಾಗಿದೆ' ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

 

ಈ ಸಿನಿಮಾದಲ್ಲಿ ಇರ್ಫಾನ್ ಖಾನ್ ಗೆ ಜೋಡಿಯಾಗಿ ಮಕೃತಿ ಕುಲ್ಹರಿ, ಅರುಣೋದಯ್ ಸಿಂಗ್ ತೆರೆ ಹಂಚಿಕೊಂಡಿದ್ದಾರೆ. ಅಭಿನವ್ ದೇವ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

40 ವರ್ಷದ ನಂತರ ತಮ್ಮ ಹೆಸರು ಬದಲಾಯಿಸಿಕೊಂಡ ಕನ್ನಡ ಚಿತ್ರರಂಗದ ಹಿರಿಯ ನಟ!