ಜೋಧ್ಪುರ : ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸ ಅನುಭವಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಗ್ಗೆ ಇಡೀ ಬಾಲಿವುಡ್ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಬಾಲಿವುಡ್ ನಟಿಯೊಬ್ಬಳು ಮಾತ್ರ ಸಲ್ಮಾನ್ ಖಾನ್ ಅವರನ್ನು ನೋಡಲು ಜೋಧ್ಪುರಕ್ಕೆ ತೆರಳಿದ್ದಾರೆ.
ಸಲ್ಮಾನ್ ಖಾನ್ ಅವರ ಜೊತೆ ಕೆಲವು ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದ ಅವರ ಆಪ್ತ ಗೆಳತಿ ನಟಿ ಪ್ರೀತಿ ಜಿಂಟಾ ಅವರು ಜೈಲು ಶಿಕ್ಷೆ ಅನುಭವಿಸುತ್ತಿರುವ ಸಲ್ಮಾನ್ ಖಾನ್ ಅವರನ್ನು ನೋಡಲು ಜೋದ್ಪುರ ಜೈಲಿಗೆ ತೆರಳಿದ್ದಾರೆ. ಶುಕ್ರವಾರ ದೆಹಲಿಯಿಂದ ಜೋದ್ಪುರಕ್ಕೆ ಬಂದಿದ್ದ ಪ್ರೀತಿ ಜಿಂಟಾ ಅವರು ಜೋದ್ಪುರ ವಿಮಾನ ನಿಲ್ದಾಣದಲ್ಲಿ ಕಾರ್ ಹತ್ತುವ ವೇಳೆ ಕಾಣಿಸಿಕೊಂಡಿದ್ದಾರೆ. ಆದರೆ ಅವರು ತಾವು ಧರಿಸಿದ್ದ ದೊಡ್ಡ ಹ್ಯಾಟ್ ಮೂಲಕ ಮುಖ ಮುಚ್ಚಿಕೊಳ್ಳುವ ಯತ್ನ ಮಾಡಿದ್ರು ಕೂಡ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
ಅಲ್ಲಿಂದ ಅವರು ಜೋದ್ಪುರ ಜೈಲಿಗೆ ತೆರಳಿದ್ದಾರೆ. ಆದರೆ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದ್ದರಿಂದ ಜೈಲಧಿಕಾರಿಗಳು ಸಲ್ಮಾನ್ ಖಾನ್ ಅವರ ಭೇಟಿಗೆ ಅವಕಾಶ ನೀಡಿದ್ರಾ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ