Publish Date: Mon, 15 Jun 2020 (10:29 IST)
Updated Date: Mon, 15 Jun 2020 (10:32 IST)
ಮುಂಬೈ: ಆತ್ಮಹತ್ಯೆಗೈದು ಸಾವಿಗೀಡಾದ ಬಾಲಿವುಡ್ ನ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಅಂತ್ಯಕ್ರಿಯೆ ಇಂದು ಮುಂಬೈನಲ್ಲಿ ನಡೆಯಲಿದೆ.
ಅವರ ಮೃತದೇಹವನ್ನು ಮುಂಬೈನ ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ತೆಗೆದುಕೊಂಡು ಹೋಗಲಾಗಿತ್ತು. ಇಂದು ಅವರ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬ ಸದಸ್ಯರು ಈಗಾಗಲೇ ತವರು ಪಾಟ್ನಾದಿಂದ ಮುಂಬೈಗೆ ಆಗಮಿಸಿದ್ದಾರೆ.
ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸುಶಾಂತ್ ಅಂತ್ಯಕ್ರಿಯೆಯಲ್ಲಿ ಸೀಮಿತ ಮಂದಿ ಮಾತ್ರ ಭಾಗವಹಿಸಲಿದ್ದಾರೆ. ಸುಶಾಂತ್ ನಾಲ್ವರು ಸಹೋದರಿಯರು ಮತ್ತು ತಂದೆಯನ್ನು ಅಗಲಿದ್ದಾರೆ.