ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಅವರ ತೋಟದ ಮನೆಯ ಗಾರ್ಡನ್ ನಲ್ಲಿ ಇಂದು ಬೆಳಿಗ್ಗೆ ಹಾವು ಕಡಿದಿದೆ.
ತಕ್ಷಣವೇ ನಟನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಸಲ್ಲುಮಿಯಾ ಚೇತರಿಸಿಕೊಳ್ಳುತ್ತಿದ್ದು, ವಿಶ್ರಾಂತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಪಾನ್ವೆಲ್ ನ ತೋಟದ ಮನೆಯಲ್ಲಿ ಗಾರ್ಡನ್ ಏರಿಯಾದಲ್ಲಿ ಸುತ್ತಾಡುತ್ತಿದ್ದಾಗ ಹಾವು ಕಡಿದಿದೆ. ಸ್ನೇಹಿತರೊಂದಿಗೆ ಮಾತನಾಡುತ್ತಾ ಕೂತಿದ್ದಾಗ ಹಾವು ಕಡಿದಿದೆ ಎನ್ನಲಾಗಿದೆ. ಸಲ್ಮಾನ್ ತೋಟದ ಮನೆಯ ಸುತ್ತಮುತ್ತ ಮರಗಿಡಗಳೇ ಹೆಚ್ಚಾಗಿದ್ದು, ಇಲ್ಲಿ ಪ್ರಾಣಿ ಪಕ್ಷಿಗಳ ಓಡಾಟ ಹೆಚ್ಚು.