Select Your Language

Notifications

webdunia
webdunia
webdunia
webdunia

22 ವರ್ಷ ಕಿರಿಯ ಯುವತಿಯನ್ನು ಮದುವೆಯಾದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್

22 ವರ್ಷ ಕಿರಿಯ ಯುವತಿಯನ್ನು ಮದುವೆಯಾದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್
ಮುಂಬೈ , ಸೋಮವಾರ, 25 ಡಿಸೆಂಬರ್ 2023 (09:19 IST)
Photo Courtesy: Twitter
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ, ನಟ ಅರ್ಬಾಜ್ ಖಾನ್ ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ 56 ನೇ ವಯಸ್ಸಿನಲ್ಲಿ ತನಗಿಂತ 22 ವರ್ಷ ಕಿರಿಯ ಯುವತಿಯನ್ನು ಅರ್ಬಾಜ್ ಮದುವೆಯಾಗಿದ್ದಾರೆ. ಈ ಮದುವೆಗೆ ಅವರ ಮೊದಲ ಪತ್ನಿ ಮಲೈಕಾ ಅರೋರಾ ಮತ್ತು 21 ವರ್ಷದ ಪುತ್ರ ಅರ್ಹಾನ್ ಕೂಡಾ ಸಾಕ್ಷಿಯಾಗಿದ್ದರು.

ಮುಂಬೈನಲ್ಲಿ ಸಹೋದರಿ ಅರ್ಪಿತಾ ಖಾನ್ ನಿವಾಸದಲ್ಲಿ ಮದುವೆ ಕಾರ್ಯಕ್ರಮ ನೆರವೇರಿದೆ. ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿರುವ ಶುರಾ ಖಾನ್ ಜೊತೆ ಅರ್ಬಾಜ್ ವಿವಾಹವಾಗಿದ್ದಾರೆ. ವಿವಾಹದ ಬಳಿಕ ಇನ್ ‍ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಅರ್ಬಾಜ್ ಈ ಮೊದಲು 1998 ರಲ್ಲಿ ಮಲೈಕಾ ಅರೋರಾರನ್ನು ಮದುವೆಯಾಗಿದ್ದರು. ಬಳಿಕ 2017 ರಲ್ಲಿ ಈ ದಂಪತಿ ವಿಚ್ಛೇದನ ಪಡೆದಿದ್ದರು. ಇದೀಗ ಮತ್ತೆ ಪ್ರೀತಿಸಿ ಶುರಾ ಖಾನ್ ಜೊತೆ ಮದುವೆಯಾಗಿದ್ದಾರೆ. ಈ ಮದುವೆಗೆ ಸಲ್ಮಾನ್ ಖಾನ್ ಮತ್ತು ಕುಟುಂಬಸ್ಥರೂ ಬಂದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಬ್ಬ ತೆಲುಗು ಸ್ಟಾರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ