Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಸಿಕ್ರೇಟ್ ಬಹಿರಂಗಪಡಿಸಿದ ಕತ್ರಿನಾ ಕೈಫ್

ಸಲ್ಮಾನ್ ಖಾನ್ ಸಿಕ್ರೇಟ್ ಬಹಿರಂಗಪಡಿಸಿದ ಕತ್ರಿನಾ ಕೈಫ್
mumbai , ಶುಕ್ರವಾರ, 15 ಡಿಸೆಂಬರ್ 2023 (14:49 IST)
ಸಲ್ಮಾನ್ ಖಾನ್ ಒಬ್ಬ ಉತ್ತಮ  ವ್ಯಕ್ತಿ ಎಂದಿದ್ದಾರೆ.ಅಲ್ಲದೇ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾಗ ಅವರ ಕುಟುಂಬದವರನ್ನು ಅನೇಕ ಬಾರಿ ಭೇಟಿಯಾಗಿದ್ದೇನೆ. ಹೀಗೆ ಭೇಟಿಯಾದಾಗ ಅವರೆಲ್ಲಾ ನನ್ನನ್ನು ಮಗಳಂತೆ ನೋಡಿಕೊಂಡಿದ್ದಾರೆ. ಸಲ್ಮಾನ್ ಖಾನ್ ಕೂಡ ನನ್ನನ್ನು ತುಂಬಾನೇ ಗೌರವಿಸುತ್ತಿದ್ದರು ಅಂತಾ ಕ್ಯಾಟ್ ಹೇಳಿದ್ದಾರೆ.
 
ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ನಡುವಿನ ಪ್ರೇಮ ಪುರಾಣ ಎಲ್ಲರಿಗೂ ಗೊತ್ತೇ ಇದೆ.ಇನ್ನೇನು ಸಲ್ಲು ಹಾಗೂ ಕತ್ರೀನಾ ಕೈಫ್ ಮದುವೆಯಾಗುತ್ತಾರೇ ಅನ್ನುವಷ್ಟರಲ್ಲಿ ಅವರಿಬ್ಬರು ಪರಸ್ಪರ ದೂರವಾಗಿದ್ದರು.ಆದ್ರೆ ಇಂದಿಗೂ ಅವರಿಬ್ಬರು ಪರಸ್ಪರ ಗೌರವಿಸುತ್ತಾರೆ ಅನ್ನೋದಕ್ಕೆ ಕತ್ರೀನಾ ನೀಡಿರುವ ಹೇಳಿಕೆಯೇ ಸಾಕ್ಷಿ.
  
ಸದ್ಯ ಕತ್ರೀನಾ ಕೈಫ್ ಹಾಗೂ ರಣ್ ಬೀರ್ ಪರಸ್ಪರ ಪ್ರೀತಿಸುತ್ತಿರೋದು ಗೊತ್ತೇ ಇದೆ. ಆದ್ರೆ ಇತ್ತೀಚಿನ ಬೆಳವಣಿಗೆ ನೋಡಿದ್ರೆ ರಣ್ ಬೀರ್ ಹಾಗೂ ಕ್ಯಾಟ್ ವಿವಾಹವಾಗುತ್ತಾರೋ ಅನ್ನೋ ಅನುಮಾನ ಮೂಡುತ್ತಿದೆ.

ಯಾಕಂದ್ರೆ ರಣ್ ಬೀರ್ ಮೊನ್ನೆಯಷ್ಟೇ ನಾವಿಬ್ಬರು ಜೊತೆಯಾಗಿರುತ್ತೇವೆ. ವಿವಾಹವಾಗೋದಿಲ್ಲ ಅಂದಿದ್ದಾರೆ. ಇನ್ನೂ ಕತ್ರೀನಾ ಕೂಡ ನಾನು ಹಾಗೂ ರಣ್ ಬೀರ್ ಒಳ್ಳೆಯ ಗೆಳೆಯರು ಅಂದಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ರೆ ಮುಂದೇನಾಗುತ್ತೆ ಅನ್ನೋ ಅನುಮಾನ ಕಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ವಿವಾಹವಾಗಲಿರುವ ಯುವತಿ ಯಾರು ಗೊತ್ತಾ?