ಅಂದ್ಹಾಗೆ ಸಲ್ಲು ಮುಂದಿನ ವರ್ಷ ವಿವಾಹವಾಗ್ತಾರೆ ಅನ್ನೋ ಸುದ್ದಿಗಳು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ರೋಮಾನಿಯನ್ ಮಾಡೆಲ್ ಇಲಿಯಾ ವಂತೂರ್ ಅವರನ್ನು ಸಲ್ಲು ವಿವಾಹವಾಗ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.
ಈ ಹಿಂದೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬಂದಿದ್ದವು.ಆದ್ರೀಗ ಅವರು ಮುಂದಿನ ವರ್ಷ ಮದುವೆಯಾಗ್ತಾರೆ ಅಂತಾ ಹೇಳಲಾಗುತ್ತಿದೆ.
ಇಷ್ಟು ದಿನ ನಟ ಸಲ್ಮಾನ್ ಖಾನ್ ಅವರನ್ನು ಎಲ್ಲರೂ ಕೇಳುತ್ತಿದ್ದ ಪ್ರಶ್ನೆ ಒಂದೇ. ನೀವು ಯಾವಾಗ ಮದುವೆಯಾಗ್ತೀರಾ ಯಾರನ್ನು ಮದುವೆಯಾಗ್ತೀರಾ ಅಂತಾ. ಸಲ್ಲು ಮಾತ್ರ ಅದಕ್ಕೆ ನೀಡುತ್ತಿದ್ದ ಉತ್ತರ ಒಂದೇ. ನನ್ನ ಕೇಸಿನ ತೀರ್ಪು ಹೊರ ಬರುವವರೆಗೂ ನಾನು ವಿವಾಹವಾಗಲ್ಲ ಅಂತಾ. ಆದರೆ ಈಗ ತೀರ್ಪು ಹೊರ ಬಂದಿದೆ. ಸಲ್ಲುಗೆ ರಿಲೀಫ್ ಸಿಕ್ಕಿದೆ. ಹಾಗಾಗಿ ಸಲ್ಮಾನ್ ಖಾನ್ ವಿವಾಹವಾಗ್ತಾರೆ ಅನ್ನೋ ಸುದ್ದಿಗಳು ಅವರ ಆಪ್ತವಯಲಗಳಿಂದ ಕೇಳಿ ಬರುತ್ತಿದೆ.
ಆದ್ರೆ ಸಲ್ಲು ಕೇಸಿನ ತೀರ್ಪು ಹೊರ ಬಂದ ಬಳಿಕ ತಮ್ಮ ವಿವಾಹದ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ. ಸದ್ಯ ಸಲ್ಲು ಸುಲ್ತಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಮುಗಿದ ಮೇಲೆ ಸಲ್ಮಾನ್ ಖಾನ್ ಅವರು ವಿವಾಹವಾಗೋ ಮನಸ್ಸು ಮಾಡಿದ್ರೂ ಅಚ್ಚರಿಯೇನಿಲ್ಲ. ಆದ್ರೆ ಇದಕ್ಕೆಲ್ಲಾ ಅವರೇ ಉತ್ತರ ನೀಡಬೇಕಾಗಿದೆ.