Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಬಗ್ಗೆ ಸನ್ನಿಲಿಯೋನ್ ಹೇಳಿದ್ದೇನು ಗೊತ್ತಾ?

ಸಲ್ಮಾನ್ ಖಾನ್ ಬಗ್ಗೆ ಸನ್ನಿಲಿಯೋನ್ ಹೇಳಿದ್ದೇನು ಗೊತ್ತಾ?
mumbai , ಗುರುವಾರ, 14 ಡಿಸೆಂಬರ್ 2023 (10:35 IST)
ನಾನು ಸಲ್ಮಾನ್ ಖಾನ್ ಅವರ ಅಭಿಮಾನಿ.ನನಗೆ ಶುಭ ಹಾರೈಸಿ ಭಾರತಕ್ಕೆ ಸ್ವಾಗತಿಸಿದ್ದು ಇಡೀ ಬಾಲಿವುಡ್ ನಲ್ಲಿ ಇವರೊಬ್ಬರೇ ಅಂತಾ ಸನ್ನಿ ಹೇಳಿದ್ದಾಳೆ. ಅದಕ್ಕಾಗಿ ನನ್ನ ಹೃದಯದಲ್ಲಿ  ನಾನು ಅವರಿಗೆ ತುಂಬಾ ವಿಶೇಷವಾದ ಸ್ಥಾನವನ್ನು ನೀಡುತ್ತೇನೆ ಅಂತಾ ಸನ್ನಿ ಲಿಯೋನ್ ಹೇಳಿದ್ದಾಳೆ.
 
ಸಲ್ಮಾನ್ ಖಾನ್ ಅದೆಷ್ಟೋ ಹುಡುಗಿಯರ ಹಾಟ್ ಫೆವರೇಟ್. ಬಾಲಿವುಡ್ ಅಂಗಳದಲ್ಲಿಯೂ ಅದೆಷ್ಟೋ ಹುಡುಗಿಯರು ಸಲ್ಲು ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾರೆ. ಇದೀಗ ಸನ್ನಿ ಲಿಯೋನ್ ಸರದಿ. ಸನ್ನು ಸಲ್ಮಾನ್ ಖಾನ್ ಬಗ್ಗೆ ಹಾಡಿ ಹೊಗಳಿದ್ದಾಳೆ.
 
ನಾನು ಸಲ್ಮಾನ್ ಖಾನ್ ಅವರ ಅಭಿಮಾನಿ.ನನಗೆ ಶುಭ ಹಾರೈಸಿ ಭಾರತಕ್ಕೆ ಸ್ವಾಗತಿಸಿದ್ದು ಇಡೀ ಬಾಲಿವುಡ್ ನಲ್ಲಿ ಇವರೊಬ್ಬರೇ ಅಂತಾ ಸನ್ನಿ ಹೇಳಿದ್ದಾಳೆ. ಅದಕ್ಕಾಗಿ ನನ್ನ ಹೃದಯದಲ್ಲಿ  ನಾನು ಅವರಿಗೆ ತುಂಬಾ ವಿಶೇಷವಾದ ಸ್ಥಾನವನ್ನು ನೀಡುತ್ತೇನೆ ಅಂತಾ ಸನ್ನಿ ಲಿಯೋನ್ ಹೇಳಿದ್ದಾಳೆ. 
 
ಸನ್ನಿ ಬಾಲಿವುಡ್ ಗೆ ಕಾಲಿಡುವ ಮೊದಲು ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.ಇನ್ನು ಸಲ್ಮಾನ್ ಖಾನ್ ನನಗೆ ಪ್ರೋತ್ಸಾಹ ನೀಡಿದ ಕ್ಷಣಗಳನ್ನು ನಾನು ಯಾವತ್ತೂ ಮರೆಯಲಾರೆ ಅಂತಾ ಆಕೆ ಹೇಳಿದ್ದಾಳೆ.
 
ಹಾಗಂಥ ನಾನು ಅವರೊಂದಿಗೆ ಹೆಚ್ಚು ಮಾತನಾಡಿಲ್ಲ.ಅವರು ಒಬ್ಬ ಅತ್ಯುತ್ತಮ ವ್ಯಕ್ತಿ. ಒಬ್ಬ ವ್ಯಕ್ತಿ ಯಾವ ಸ್ಥಾನದಲ್ಲಿ ಇದ್ದಾನೆ ಅಥವಾ ಅವನು ಎಷ್ಟು ಕೆಳ ಮಟ್ಟದಲ್ಲೇ ಇರಲಿ ಸಲ್ಮಾನ್ ಖಾನ್ ಎಲ್ಲರನ್ನೂ ಸಮಾನವಾಗಿ ನೋಡುತ್ತಾರೆ. ಅವರ ಅದೇ ಗುಣ ನನಗೆ ತುಂಬಾ ಇಷ್ಟವಾಗುತ್ತೆ.ಅಲ್ಲದೇ ಸಲ್ಲು ಅವರ ಹುಟ್ಟಹಬ್ಬಕ್ಕೆ ಮೊದಲೇ ಸನ್ನಿ ಶುಭಾಶಯ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕಕಾಲಕ್ಕೆ ಎರಡು ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ ಯಶ್