Select Your Language

Notifications

webdunia
webdunia
webdunia
webdunia

ಐಶ್ವರ್ಯ ರೈ ಬಗ್ಗೆ ಕಮೆಂಟ್ ಮಾಡಿದ ಸಲ್ಮಾನ್ ಖಾನ್

Salman Khan
mumbai , ಶುಕ್ರವಾರ, 22 ಡಿಸೆಂಬರ್ 2023 (11:44 IST)
ಈ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸುವುದರ ಮೂಲಕ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದ ಐಶ್, ಕುಟುಂಬಸ್ಥರಿಂದ ವಿರೋಧಗಳು ಕೇಳಿ ಬಂದಿದ್ದವು. ಈ ಚಿತ್ರದಲ್ಲಿ ರಣಬೀರ್ ಕಪೂರ್ ಜತೆಗೆ ಐಶ್ವರ್ಯ ರೈ ಹಾಟ್ ಆಗಿ ಕಾಣಿಸಿಕೊಂಡಿದ್ದರು. 
 
ಕಿಸ್ಸಿಂಗ್ ದೃಶ್ಯಗಳಿಂದ ಹಿಡಿದು ರೋಮ್ಯಾನ್ಸ್ ಮಾಡುವ ದೃಶ್ಯದ ವರೆಗೆ ಐಶ್ವರ್ಯ 'ಏ ದಿಲ್ ಹೈ ಮುಷ್ಕಿಲ್' ಪಡ್ಡೆ ಹುಡುಗರ ನಿದ್ದೆಗೆಡಿಸಿತ್ತು. ಚಿತ್ರದಲ್ಲಿ ಬಿಂದಾಸ್ ಆಗಿ ನಟಿಸಿರುವ ಐಶ್. ಈ ರೀತಿ ಸೊಸೆ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಬಚ್ಚನ್ ಕುಟುಂಬಕ್ಕೆ ಇಷ್ಟವಿರಲಿಲ್ಲ. ಆದ್ದರಿಂದ ರಣಬೀರ್ ಜತೆಗಿನ ಕೆಲ ದೃಶ್ಯಗಳನ್ನು ತೆಗೆದುಹಾಕುವಂತೆ ಬಚ್ಚನ್ ಕುಟುಂಬ ಹೇಳಿತ್ತು.
 
ಇದರ ಬೆನ್ನಲ್ಲೇ ಐಶ್ವರ್ಯ ಮಾಜಿ ಪ್ರಿಯಕರ ನಟ ಸಲ್ಮಾನ್ ಖಾನ್‌ಗೆ ಐಶ್ವರ್ಯ ಅವರ 'ಏ ದಿಲ್ ಹೈ ಮುಷ್ಕಿಲ್'  ಚಿತ್ರದ ಬಗ್ಗೆ ಗೊತ್ತೇ ಇಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. 
 
ಮೂಲಗಳ ಪ್ರಕಾರ 'ಏ ದಿಲ್ ಹೈ ಮುಷ್ಕಿಲ್' ಚಿತ್ರ ನೋಡಿದ್ರಾ ಎಂದು ಸಲ್ಲುಗೆ ಕೇಳಲಾಗಿತ್ತು. ಈ ವೇಳೆ ಸಲ್ಲು ಅವರಿಂದ ಬಂದ ಉತ್ತರ ನಕಾರಾತ್ಮಕವಾಗಿತ್ತು. ಸಲ್ಲು ಹೇಳಿದ್ದೇನು ಎಂದರೆ, 'ನಾನು ಚಿತ್ರದ  ವೀಕ್ಷಿಸಿಲ್ಲ', 'ನೀವೂ ವೀಕ್ಷಿಸಿದ್ರಾ? ಹೇಳಿ ಹೇಗಿದೆ? ಎಂದು ಸಲ್ಮಾನ್ ಉತ್ತರಿಸಿದ್ರಂತೆ'.
 
ಮತ್ತೊಂದು ಮೂಲಗಳ ಪ್ರಕಾರ, ಸಲ್ಮಾನ್ ವೀಕ್ಷಣೆ ಮಾಡಿದ್ದಾರಂತೆ. ಐಶ್ವರ್ಯ ನಟನೆಯನ್ನು ಮೆಚ್ಚಿದ್ದಾರಂತೆ. ಈ ವೇಳೆ ಟೀಸರ್ ಬಗ್ಗೆ ಕೇಳಲಾದ ಪ್ರಶ್ನೆಗೆ ಸಲ್ಲು ಹೇಳಿದ್ದ ಉತ್ತರ ಹೀಗಿತ್ತು.. 'ಐಶ್ವರ್ಯ ತುಂಬಾ ಬ್ಯೂಟಿಫುಲ್' ಎಂದು ಸಲ್ಲು ಹೇಳಿದ್ರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆನ್ಸಾರ್ ಮಂಡಳಿ ವಿರುದ್ಧ ರಾಖಿ ಸಾವಂತ್ ಗರಂ