ಸಲ್ಮಾನ್ ಹಾಗೂ ಸುಷ್ಮಿತಾ ಜೀವನದಲ್ಲಿ ಹಲವರು ಬಂದು ಹೋದರು ಸಿಂಗಲ್ ಆಗೇ ಇದ್ದಾರೆ. ಇನ್ನೂ ಸಲ್ಮಾನ ರೊಮೇನಿಯನ್ ಬ್ಯೂಟಿ ಲೂಲಿಯಾ ವೆಂಟೂರ್ ಜತೆಗೆ ಸಂಬಂಧ ಕೇಳಿ ಬರುತ್ತಿದೆ. ಇತ್ತೀಚೆಗೆ ಅವರು ಹೆಚ್ಚು ಲೂಲಿಯಾ ಜತೆಗೆ ಕಾಲ ಕಳೆಯುತ್ತಿದ್ದಾರೆ. ಈ ಹಿಂದೆ ಇಬ್ಬರು ರಹಸ್ಯವಾಗಿ ಮದುವೆ ಕೂಡ ಮಾಡಿಕೊಳ್ಳಲು ಸಿದ್ಧತೆ ಕೂಡ ನಡೆಸಿದ್ರಂತೆ.
 
 			
 
 			
					
			        							
								
																	
	 
	ಸಲ್ಲು ಮದುವೆ ಯಾಕೆ ಆಗಿಲ್ಲ ಎಂದ್ರೆ ಅವರಿಗೆ ಯಾರು ಹುಡುಗಿ ಸೀಗುತ್ತಿಲ್ಲ ಎಂದಲ್ಲ, ಆದ್ರೆ ಅವರು ತಮ್ಮ ಇಷ್ಟದ ಹಾಗೇ ಸಿಂಗಲ್ ಆಗಿದ್ದಾರೆ ಎಂದು ಸುಷ್ಮಿತಾ ತಿಳಿಸಿದ್ದಾರೆ. 
	 
	ಬ್ಯಾಚುಲರ್ ಬಾಯ್ ಸಲ್ಮಾನ್ ಮದುವೆ ಆಗದೇ ಸಿಂಗಲ್ ಆಗೇ ಇದ್ದಾರೆ. ಇದುವೆರಗೂ ಅವರು ಏಕೆ ಮದುವೆಯಾಗಲಿಲ್ಲ ಎಂಬುದು ಸಲ್ಲು ಅಭಿಮಾನಿಗಳಿಗೆ ಮಾತ್ರವಲ್ಲ, ಇಡೀ ಜನರ ಪ್ರಶ್ನೆ, ಆದ್ರೆ ಇಂದಿಗೂ ಹಲವರು ಸಲ್ಲು ಏಕೆ ಮದುವೆಯಾಗುತ್ತಿಲ್ಲ ಎಂದು ಯೋಚನೆ ಮಾಡ್ತಾ ಇದ್ದಾರೆ. ಇದಕ್ಕೆ ಉತ್ತರ ನಟಿ ಸುಷ್ಮಿತಾ ನೀಡಿದ್ದಾರೆ. ಸಲ್ಲು ಏಕೆ ಮದುವೆಯಾಗಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. 
	 
	ಫ್ಯಾಶನ್ ಶೋನಲ್ಲಿ ಭಾಗಿಯಾಗಿದ್ದ ಸುಷ್ಮಿತಾ ಸೇನ್‌ಗೆ ಸಲ್ಲು ವಿವಾಹದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸುಷ್ಮಿತಾ ಸೇನ್, ಮಾಧ್ಯಮದವರು ಕೇಳುವ ಪ್ರಶ್ನೆಗೆ ಮೊದಲೇ, ಸುಷ್ಮಿತಾ ಈ ರೀತಿ ಹೇಳಿದ್ರು. ' ನನಗೆ ಗೊತ್ತು ನೀವು ಏನು ಕೇಳಲು ಬಯಸುತ್ತೀರಾ ಎಂದ  ಅವರು, ಸಿಂಗಲ್ ಸ್ಟೇಟಸ್ ಸೆಲೆಬ್ರಿಟಿ ಹೊಂದಿರುವ ಇಬ್ಬರ ಬಗ್ಗೆ ಈ ರೀತಿ ಪ್ರಶ್ನೆ ಕೇಳುತ್ತಿದ್ದೀರಿ ಎಂದು ಸುಷ್ಮಿತಾ ತಿಳಿಸಿದ್ದಾರೆ.