Select Your Language

Notifications

webdunia
webdunia
webdunia
webdunia

ಸಲ್ಮಾನ್‌ಖಾನ್‌ರೊಂದಿಗೆ ನಟಿಸಲಿದ್ದಾರಾ ಐಶ್ವರ್ಯ ರೈ ?

Salman Khan
mumbai , ಬುಧವಾರ, 20 ಡಿಸೆಂಬರ್ 2023 (14:37 IST)
ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿದ್ದರೆ, ಸಲ್ಮಾನ್ ಖಾನ್ ಅವಿವಾಹಿತರಾಗಿಯೇ ಉಳಿದಿದ್ದಾರೆ. ಐಶ್ವರ್ಯ ರೈ ಯಾವ ಷರತ್ತು ವಿಧಿಸಿದ್ದಾರೆ ಎನ್ನುವುದೇ ಕುತೂಹಲದ ಯಕ್ಷ ಪ್ರಶ್ನೆಯಾಗಿದೆ. ಮಾಧ್ಯಮ ಮೂಲಗಳ ಪ್ರಕಾರ, ಚಿತ್ರದ ಕಥೆ ಮತ್ತು ಚಿತ್ರದ ನಿರ್ದೇಶಕ ಅಸಾಮಾನ್ಯರಾಗಿದ್ದರೆ ಮಾತ್ರ ಸಲ್ಮಾನ್ ಖಾನ್‌ರೊಂದಿಗೆ ನಟಿಸಲು ಸಿದ್ದ ಎಂದು ಐಶ್ ಬೇಬಿ ಹೇಳಿದ್ದಾರಂತೆ.
 
ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಹಮ್ ದಿಲ್ ದೇ ಚುಕೇ ಸನಮ್ ಚಿತ್ರದಲ್ಲಿ ನಟಿಸಿದ ಐಶ್ವರ್ಯ ರೈ ಬಚ್ಚನ್ ಮತ್ತು ಸಲ್ಮಾನ್ ಖಾನ್ ಜೋಡಿ ಚಿತ್ರರಸಿಕರನ್ನು ಮೋಡಿ ಮಾಡಿತ್ತು. ಮತ್ತೆ ಇವರಿಬ್ಬರು ಜೊತೆಯಾಗಿ ನಟಿಸಬೇಕು ಎನ್ನುವ ಪ್ರೇಕ್ಷಕರ ಕನಸು ನನಸಾಗದೆ ಉಳಿದಿತ್ತು. ಇದೀಗ ಒಂದು ಷರತ್ತಿನ ಮೇಲೆ ಐಶ್ವರ್ಯ, ಸೂಪರ್ ಸ್ಟಾರ್ ಸಲ್ಮಾನ್‌‍ನೊಂದಿಗೆ ಸಿದ್ದವಾಗಿದ್ದಾರಂತೆ. 
 
ಮಾಜಿ ಪ್ರೇಮಿಗಳಾದ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ ಅತ್ಯುತ್ತಮ ಜೋಡಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದರು. ನಂತರ ಇಬ್ಬರ ನಡುವಿನ ಲವ್ವಿ ಡವ್ವಿ ಮುರಿದು ಬಿದ್ದು  ನಾನೊಂದು ತೀರ ನಿನೊಂದು ತೀರ ಎನ್ನುವಂತಾಗಿದ್ದಾರೆ. 
 
ರಣಬೀರ್ ಕಪೂರ್ ಮತ್ತು ದಿಪೀಕಾ ಪಡುಕೋಣೆ ತಮ್ಮ ಲವ್ವಿ ಡವ್ವಿ ಮುರಿದು ಬಿದ್ದ ನಂತರ ಯೇ ಜವಾನಿ ಹೈ ದಿವಾನಿ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಸಲ್ಮಾನ್ ಖಾನ್ ಕೂಡಾ ಕತ್ರಿನಾ ಕೈಫ್‌ನೊಂದಿಗೆ ಸಂಬಂಧ ಮುರಿದು ಬಿದ್ದ ನಂತಕ ಎಕ್ ಥಾ ಟೈಗರ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದು. ಆದ್ದರಿಂದ, ಐಶ್ ಮತ್ತು ಸಲ್ಮಾನ್ ಜೊತೆಯಾಗಿ ಯಾಕೆ ನಟಿಸಬಾರದು ಎನ್ನುವ ಪ್ರಶ್ನೆ ಉದ್ಭವಾಗುತ್ತಿದೆ. ಇದೀಗ ಅದಕ್ಕೆ ಉತ್ತರ ದೊರೆತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗಾದಿಂದಲೇ ನಾನು ಸುಂದರವಾಗಿ ಕಾಣುತ್ತೇನೆ ಎಂದ ನಟಿ ಜಾಕ್ಲಿನ್