Select Your Language

Notifications

webdunia
webdunia
webdunia
webdunia

ವಿವಾಹವಾಗಲ್ಲ ಎಂದ ಯುವತಿಗೆ ಯುವಕ ಏನ್ ಮಾಡ್ದ ಗೊತ್ತಾ?

young woman
mumbai , ಸೋಮವಾರ, 18 ಡಿಸೆಂಬರ್ 2023 (13:29 IST)
ಕಾಲೇಜು ಓದುವುದನ್ನು ಅರ್ಧಕ್ಕೆ ನಿಲ್ಲಿಸಿದ್ದ ಆರೋಪಿ , ಯುವತಿಯ ನೆರೆಮನೆಯಲ್ಲಿ ವಾಸವಾಗಿದ್ದ. ಪ್ರತಿನಿತ್ಯ ಅವರ ಮನೆಗೆ ತೆರಳಿ ಹರಟೆ ಹೊಡೆಯುತ್ತಿದ್ದ. ಕೆಲ ತಿಂಗಳುಗಳ ಹಿಂದೆಆರೋಪಿ ಯುವಕ,  ಯುವತಿಯ ಮುಂದೆ ವಿವಾಹ ಪ್ರಸ್ತಾಪ ಇಟ್ಟಿದ್ದ. ಆದರೆ. ಆಕೆ ಆತನ ಪ್ರಸ್ತಾಪ ತಿರಸ್ಕರಿಸಿದ್ದಳು ಎನ್ನಲಾಗಿದೆ.
 
ಯುವತಿ ಸಿಂಧುಜಾ ಪೋಷಕರು ವರನಿಗಾಗಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಜಾಹೀರಾತು ಹಾಕಿದ್ದರು. ಇದರಿಂದ ಆಕ್ರೋಶಗೊಂಡ ಆಕಾಶ್, ಸಿಂಧುಜಾ ಪೋಷಕರಿಗೆ ಬೆದರಿಕೆ ಹಾಕಿದ್ದ.
 
ನಿನ್ನೆ ರಾತ್ರಿ ಸಿಂಧುಜಾ ಮನೆಗೆ ಬಂದ ಆಕಾಶ್ ಜಗಳ ಆರಂಭಿಸಿದ. ಕೋಪದ ಭರದಲ್ಲಿ ಸಿಂಧುಜಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಸಿಂಧುಜಾ ಕೂಗಿಗೆ ಓಡೋಡಿ ಬಂದ ಸಿಂಧುಜಾ ತಾಯಿ ಮತ್ತು ಸಹೋದರಿ ಸುಟ್ಟಗಾಯಗಳಿಂದ ಉಳಿಸಲು ಯತ್ನಿಸಿದರು. ಮನೆಯವರ ಕೂಗಾಟ ಕೇಳಿ ನೆರೆಹೊರೆಯವರು ಸಹಾಯಕ್ಕಾಗಿ ಧಾವಿಸಿದರು.  
 
ಈ ಸಂದರ್ಭದಲ್ಲಿ ಪರಾರಿಯಾಗಲು ಯತ್ನಿಸಿದ ಆಕಾಶ್‌ನನ್ನು ಹಿಡಿದ ಸ್ಥಳೀಯರು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ಮೂವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಿಂಧುಜಾ ಬದುಕುಳಿಯಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ 22 ವರ್ಷದ ಯುವತಿಯನ್ನು ಜೀವಂತವಾಗಿ ದಹಿಸಿದ ಆರೋಪಿ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಯನ್ನು ಉಳಿಸಲು ಹೋದ ತಾಯಿ ಮತ್ತು ಸಹೋದರಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
 
 ಐಟಿ ಕಂಪೆನಿಯಲ್ಲಿರುವ ಐಟಿ ಕಂಪೆನಿಯಲ್ಲಿ ಯುವತಿ ಸಿಂಧುಜಾ ಉದ್ಯೋಗಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
  
ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡ ಸಿಂಧುಜಾಳನ್ನು ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸಿಂಧುಜಾ ತಾಯಿಗೆ ಶೇ.50 ರಷ್ಟು ಸುಟ್ಟಗಾಯಗಳಾಗಿದ್ದು ಸಹೋದರಿ ನಿವೇದಿಕಾಗೆ ಶೇ.20 ರಷ್ಟು ಗಾಯಗಳಾಗಿವೆ. ಸಿಂಧುಜಾ ತಂದೆ ಶನ್ಮುಗಮ್ ದುಬೈಯಲ್ಲಿ ಉದ್ಯೋಗಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧ ಸರಿಯಲ್ಲ ಎಂದ ಪತಿಗೆ ಪತ್ನಿ ಏನ್ ಮಾಡಿದ್ಳು ಗೊತ್ತಾ?