Select Your Language

Notifications

webdunia
webdunia
webdunia
webdunia

ಯುವತಿಯನ್ನು ಅಪಹರಿಸಿ ಗ್ಯಾಂಗ್‌ರೇಪ್ ಎಸಗಿದ ಆರೋಪಿಗಳ ಬಂಧನ

kidnap
kolkatta , ಗುರುವಾರ, 14 ಡಿಸೆಂಬರ್ 2023 (12:00 IST)
ಅತ್ಯಾಚಾರಕ್ಕೊಳಗಾದ 21 ವರ್ಷ ವಯಸ್ಸಿನ ಯುವತಿ ಪೊಲೀಸರಿಗೆ ದೂರು ನೀಡಿ, ಮೂವರು ವ್ಯಕ್ತಿಗಳು ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. 
 
ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ 16 ವರ್ಷದ ಹದಿಹರೆಯದ ಯುವಕ ಸೇರಿದಂತೆ ಮೂವರು ಕಾಮುಕರನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.
 
ಒಬ್ಬ ಆರೋಪಿ 16 ವರ್ಷದವನಾಗಿದ್ದು ಇತರ ಇಬ್ಬರು ಆರೋಪಿಗಳು 25 ಮತ್ತು 31 ವರ್ಷ ವಯಸ್ಸಿನವರಾಗಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. 
 
ಇಬ್ಬರು ಆರೋಪಿಗಳನ್ನು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದ್ದರೆ ಒಬ್ಬ ಆರೋಪಿಯನ್ನು ರಿಮ್ಯಾಂಡ್‌ ಹೋಮ್‌ಗೆ ಕಳುಹಿಸಲಾಗಿದೆ. ಯುವತಿಯ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
ರಾಜ್ಯಸಭೆಯಲ್ಲಿ ಬಾಲಾಪರಾಧಿ ಮಸೂದೆಗೆ ಅಂಗೀಕಾರ ದೊರೆತಿದ್ದು, ಗಂಭೀರ ಅಪರಾಧಗಳಲ್ಲಿ 16 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರನ್ನು ವಯಸ್ಕರು ಎಂದು ಪರಿಗಣಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾವಿನ ದ್ವೇಷವನ್ನು ಮೀರಿದ ದ್ವೇಷ: ತಂದೆ ಕೊಂದವನನ್ನು ತುಂಡಾಗಿ ಕತ್ತರಿಸಿದ ಪುತ್ರ