Publish Date: Wed, 13 Dec 2023 (12:16 IST)
Updated Date: Wed, 13 Dec 2023 (12:17 IST)
ಪೊಲೀಸ್ ಮೂಲಗಳ ಪ್ರಕಾರ, ಮುಂಬೈನ ಶಾಲೆಯ ನಾಲ್ಕು ವಿದ್ಯಾರ್ಥಿಗಳು ತಮ್ಮ ಸಹಪಾಠಿಯಾಗಿದ್ದ ವಿದ್ಯಾರ್ಥಿನಿಯನ್ನು ವಿದ್ಯಾಭ್ಯಾಸದಲ್ಲಿ ನೆರವಾಗಲು ಮನೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಮನೆಗೆ ಬಂದ ವಿದ್ಯಾರ್ಥಿನಿಯ ಮೇಲೆ ನಾಲ್ಕು ವಿದ್ಯಾರ್ಥಿಗಳು ಗ್ಯಾಂಗ್‌ರೇಪ್ ಎಸಗಿದ್ದಾರೆ. ಗ್ಯಾಂಗ್‌ರೇಪ್ ಎಸಗುತ್ತಿರುವ ದೃಶ್ಯಗಳನ್ನು ವಾಟ್ಸಪ್ ಮೂಲಕ ಹರಿಬಿಟ್ಟಿದ್ದಾರೆ. ಇದೀಗ ವೈರಲ್ ಆಗಿದೆ ಎನ್ನಲಾಗಿದೆ.
ಶಾಲೆಯ ನಾಲ್ಕು ಮಂದಿ ವಿದ್ಯಾರ್ಥಿಗಳು ತಮ್ಮ ಸಹಪಾಠಿ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್ ಎಸಗಿ, ಅತ್ಯಾಚಾರವೆಸಗುತ್ತಿರುವ ವಿಡಿಯೋವನ್ನು ವಾಟ್ಸಪ್‌ನಲ್ಲಿ ಪೋಸ್ಟ್ ಮಾಡಿದ ಹೇಯ ಘಟನೆ ವರದಿಯಾಗಿದೆ. ಆರೋಪಿ ಬಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಗ್ಯಾಂಗ್‌ರೇಪ್ ಎಸಗಿರುವ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದಲ್ಲಿ ವಿಡಿಯೋ ಆನ್‌ಲೈನ್‌ನಲ್ಲಿ ಹರಿಬಿಡುವುದಾಗಿ ವಿದ್ಯಾರ್ಥಿಗಳು ಬೆದರಿಸಿದ್ದಾರೆ.
ಆದರೆ, ವಿದ್ಯಾರ್ಥಿಗಳು ವಾಟ್ಸಪ್‌ನಲ್ಲಿ ಹರಿಬಿಟ್ಟ ವಿಡಿಯೋ ಅದು ಹೇಗೋ ಬಾಲಕಿಯ ಚಿಕ್ಕಮ್ಮಳಿಗೆ ತಲುಪಿದೆ. ಚಿಕ್ಕಮ್ಮ ಗ್ಯಾಂಗ್‌ರೇಪ್‌ಗೊಳಗಾದ ವಿದ್ಯಾರ್ಥಿನಿಯನ್ನು ಕರೆದು, ಘಟನೆಯ ಬಗ್ಗೆ ಮಾಹಿತಿ ಪಡೆದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನಾಲ್ಕು ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.