Select Your Language

Notifications

webdunia
webdunia
webdunia
webdunia

ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ವಿವಾಹ: ಪತಿಗೆ ಮಹಿಳೆ ಮಾಡಿದ್ದು ಕೇಳಿದ್ರೆ ಬೆಚ್ಚಿ ಬೀಳ್ತಿರಿ

ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ವಿವಾಹ: ಪತಿಗೆ ಮಹಿಳೆ ಮಾಡಿದ್ದು ಕೇಳಿದ್ರೆ ಬೆಚ್ಚಿ ಬೀಳ್ತಿರಿ
raisen , ಶುಕ್ರವಾರ, 22 ಡಿಸೆಂಬರ್ 2023 (14:22 IST)
ಕಳೆದ 2022ರಲ್ಲಿ ಪೋಷಕರು ನನಗೆ ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ವಿವಾಹ ಮಾಡಿಸಿದ್ದರು. ಪೋಷಕರು ಒತ್ತಾಯಕ್ಕೆ ಮಣಿದು ಕೆಲ ದಿನಗಳ ಹಿಂದೆ ಮತ್ತೆ ಪತಿಯ ಮನೆಗೆ ವಾಪಸಾಗಿದ್ದಳು. ಆದರೆ, ಪತಿ ರಾತ್ರಿ ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರಿಂದ ಕೋಪಗೊಂಡು ಆತನ ಗುಪ್ತಾಂಗಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಗಿ ಆರೋಪಿ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. 
 
ಇಷ್ಟವಾಗದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರಿಂದ ಆಕ್ರೋಶಗೊಂಡ ಮಹಿಳೆ ಪತಿಯ ಗುಪ್ತಾಂಗದ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ವರದಿಯಾಗಿದೆ.
 
ಮಧ್ಯರಾತ್ರಿ ಪತ್ನಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದಾಗ 25 ವರ್ಷ ವಯಸ್ಸಿನ ಪತಿ ರಾಮ್ ದಯಾಳ್ ಆರ್ಹಿವಾರ್ ಗಾಢನಿದ್ರೆಯಲ್ಲಿದ್ದ ಪೊಲೀಸ್ ಮೂಲಗಳು ತಿಳಿಸಿವೆ.
 
ಮೈಮೇಲೆ ಬೆಂಕಿ ಹೊತ್ತಿಕೊಂಡಿದ್ದರಿಂದ ಎಚ್ಚರಗೊಂಡ ಪತಿ ರಾಮ್ ಬೆಂಕಿಯಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾಗ ಪತ್ನಿ ಆತನ ಮುಖದ ಮೇಲೂ ಸೀಮೆಎಣ್ಣೆ ಎರಚಿ ಮತ್ತಷ್ಟು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾಳೆ. ಗಂಭೀರವಾಗಿ ಗಾಯಗೊಂಡ ರಾಮನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
 
ರಾಮ್ ದಯಾಳ್ ಆಹಿರ್ವಾರ್ ಪತ್ನಿಯನ್ನು ಪೊಲೀಸರು ಬಂಧಿಸಿ ಆಕೆಯ ವಿರುದ್ಧ ಹತ್ಯಾಯತ್ನ ಪ್ರಕರಣ ದಾಖಲಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹತ್ಯೆಯ ಮೂನ್ಸೂಚನೆ ನೀಡಿದ್ದ ಯುವತಿ: ಮಾರನೇ ದಿನವೇ ಹತ್ಯೆಯಾದಳು