Select Your Language

Notifications

webdunia
webdunia
webdunia
webdunia

ಹತ್ಯೆಯ ಮೂನ್ಸೂಚನೆ ನೀಡಿದ್ದ ಯುವತಿ: ಮಾರನೇ ದಿನವೇ ಹತ್ಯೆಯಾದಳು

ಹತ್ಯೆಯ ಮೂನ್ಸೂಚನೆ ನೀಡಿದ್ದ ಯುವತಿ: ಮಾರನೇ ದಿನವೇ ಹತ್ಯೆಯಾದಳು
uttar pradesh , ಶುಕ್ರವಾರ, 22 ಡಿಸೆಂಬರ್ 2023 (14:10 IST)
ನನ್ನ ಜೀವ ಅಪಾಯದಲ್ಲಿದೆ.  ನನಗೇನಾದರು ಆದರೆ ಅವರೇ ಕಾರಣರು. ನಾನು ಇಮ್ರಾನ್‌ನನ್ನು ಮದುವೆಯಾಗ ಬಯಸುತ್ತೇನೆ ಎಂದು ಯುವತಿ ಹೇಳಿರುವ ವಿಡಿಯೋ ವೈರಲ್ ಆದ ನಂತರ ಅಪರಾಧಗಳ ವಿರುದ್ಧ ಕೇಸ್ ದಾಖಲಾಗಿದೆ. 
 
ಈ ವಿಡಿಯೋವನ್ನು ಯಾರು ಅಪ್ಲೋಡ್ ಮಾಡಿದರೋ ಗೊತ್ತಿಲ್ಲ ಇದು ವೈರಲ್ ಆಗಿ ಓಡಿದೆ. ಆದರೆ ಅಷ್ಟರಲ್ಲಾಗಲೇ 26 ವರ್ಷದ ಯುವತಿ ಹೆಣವಾಗಿದ್ದಳು. 
 
ಅಂತರ್ಜಾಲದಲ್ಲಿ ಈ ವಿಡಿಯೋ ಕ್ಲಿಪ್ ನೋಡಿದ ಪೊಲೀಸರು ಆಕೆಯ ಗ್ರಾಮಕ್ಕೆ ಬಂದು, ವಿಡಿಯೋದ ಆಧಾರದ ಮೇಲೆ ತಂದೆ-ತಾಯಿ, ನಾಲ್ಕು ಜನ ಸಹೋದರರು ಸೇರಿದಂತೆ ಮನೆಯ 6 ಜನ ಸದಸ್ಯರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಮರ್ಯಾದಾ ಹತ್ಯೆ ಎಂಬ ಅನುಮಾನ ವ್ಯಕ್ತವಾಗಿದೆ. 
 
ಮುಂಬೈನಲ್ಲಿ ವಾಸವಾಗಿದ್ದ ಕುಟುಂಬ ಒತ್ತಾಯಪೂರ್ವಕವಾಗಿ ಸೋನಿಯನ್ನು ಉತ್ತರ ಪ್ರದೇಶದಲ್ಲಿರುವ ತಮ್ಮಗ್ರಾಮಕ್ಕೆ ಕರೆದೊಯ್ದಿತ್ತು ಎಂದು ತಿಳಿದು ಬಂದಿದೆ. ಆಕೆಯ ದೇಹವನ್ನು ಸಮಾಧಿಯಿಂದ ಮೇಲೆತ್ತಲಾಗಿದ್ದು ಆಕೆಯ ದೇಹದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 
 
ಕಳೆದ ಕೆಲ ದಿನಗಳ ಹಿಂದೆ ಕುಟುಂಬ ಗ್ರಾಮಕ್ಕೆ ಆಗಮಿಸಿತ್ತು. ಕಳೆದ ಶುಕ್ರವಾರ ಮಗಳು ಸಾವನ್ನಪ್ಪಿದಳು ಎಂದು ಕುಟುಂಬದವರು ಹೇಳಿದರು. ಆದರೆ ಹೇಗೆ ಸತ್ತಳು ಎಂದು ಹೇಳಿರಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರಿಗೆ ಕರೆ ಮಾಡಿದ ಪ್ರಧಾನಿ ಮೋದಿ: ಕಂಗಾಲಾದ ಅಧಿಕಾರಿ ಮಾಡಿದ್ದೇನು?