Select Your Language

Notifications

webdunia
webdunia
webdunia
webdunia

ಅಧಿಕಾರಿಗೆ ಕರೆ ಮಾಡಿದ ಪ್ರಧಾನಿ ಮೋದಿ: ಕಂಗಾಲಾದ ಅಧಿಕಾರಿ ಮಾಡಿದ್ದೇನು?

ಅಧಿಕಾರಿಗೆ ಕರೆ ಮಾಡಿದ ಪ್ರಧಾನಿ ಮೋದಿ: ಕಂಗಾಲಾದ ಅಧಿಕಾರಿ ಮಾಡಿದ್ದೇನು?
delhi , ಶುಕ್ರವಾರ, 22 ಡಿಸೆಂಬರ್ 2023 (12:54 IST)
ವ್ಯಕ್ತಿಯೊಬ್ಬ ದೂರವಾಣಿಯಲ್ಲಿ ಪ್ರಧಾನಿ ನಿಮಗೆ ಕರೆ ಮಾಡುತ್ತಾರೆಂದು ತಿಳಿಸಿದಾಗ ಏನಾಗುತ್ತಿದೆಯೆಂದು ನಂಬಲು ಅಧಿಕಾರಿಗೆ ಸಾಧ್ಯವಾಗಲಿಲ್ಲ. ಅವನ ಮೆದುಳು ಕೆಲವು ಸೆಕೆಂಡುಗಳ ಕಾಲ ಮರಗಟ್ಟಿತು. ಕಾಲುಗಳು ಅದುರುವ ಅನುಭವ ಉಂಟಾಯಿತು. ಕ್ಷೀಣ ದನಿಯಲ್ಲಿ ''ಎಸ್'' ಎಂದು ಉದ್ಗರಿಸಿದ್ದರು. ಕೆಲವು ಬೀಪ್ ಶಬ್ದಗಳ ಬಳಿಕ ಕರೆ ವರ್ಗಾಯಿಸಲಾಯಿತು ಮತ್ತು ಸ್ವಯಂ ಮೋದಿ ಕರೆ ಮಾಡಿದ್ದರು ಎಂದು ಪುಷ್ಪಕ್ ಪೋಸ್ಟ್‌ನಲ್ಲಿ ತಿಳಿಸಿದರು.
 
ರಾತ್ರಿ ಸುಮಾರು 10 ಗಂಟೆಯ ಸಮಯ. ತ್ರಿಪುರಾದ ಐಎಎಸ್‌ ಅಧಿಕಾರಿಗೆ ಕರೆಯೊಂದು ಬರುತ್ತದೆ. ಆ ಕರೆಯಲ್ಲಿ ಪ್ರಧಾನಮಂತ್ರಿ ಮೋದಿ ನಿಮ್ಮೊಡನೆ ಮಾತನಾಡಲು ಬಯಸುತ್ತಾರೆಂದು ತಿಳಿಸಿದ್ದಾಗ ಐಎಎಸ್ ಅಧಿಕಾರಿ ಜಂಘಾಬಲವೇ ಉಡುಗಿಹೋಗಿತ್ತು.  ಅವರಿಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಪ್ರಧಾನಿ ಏನು ಹೇಳುವರೋ ಎಂಬ ನಿರೀಕ್ಷೆಯಲ್ಲಿ ಅವರ ಮೈ ನಡುಗಲಾರಂಭಿಸಿತು. ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಲಾದ ಈ ಸುದ್ದಿ ವೈರಲ್ ಆಗಿದ್ದು, ಐಎಎಸ್ ಅಧಿಕಾರಿಯ ಆತಂಕವನ್ನು ಬಣ್ಣಿಸಿದೆ.
 
ಫೇಸ್‌ಬುಕ್ ಬಳಕೆದಾರ ಫುಷ್ಪಕ್ ಚಕ್ರವರ್ತಿ ಈ ಪೋಸ್ಟ್ ಮಾಡಿದ್ದು, ಪ್ರಧಾನಿ ಮೋದಿ ಅಧಿಕಾರಿಗೆ ಕರೆ ಮಾಡಿ  ಮಳೆಯಿಂದ ಹಾನಿಗೊಂಡ ಎನ್‌ಎಚ್ 208(ಎ) ರಸ್ತೆಯ ಸುಧಾರಣೆಗೆ ವೈಯಕ್ತಿಕವಾಗಿ ಗಮನಹರಿಸಿದ್ದನ್ನು ತಿಳಿಸಿದ್ದಾರೆ. ಎನ್‌ಎಚ್ 208 ತ್ರಿಪುರಾ ಜತೆ ದೇಶದ ಉಳಿದ ಭಾಗ ಸಂಪರ್ಕ ಹೊಂದಿದ ಏಕಮಾತ್ರ ಜೀವಸೆಲೆಯಾಗಿದೆ.
 
ನನ್ನ ತಂದೆಗೆ ಚಿರಪರಿಚಿತರಾದ ಐಎಎಸ್ ಅಧಿಕಾರಿ ಉತ್ತರ ತ್ರಿಪುರಾದಲ್ಲಿ ಸೇವೆಯಲ್ಲಿದ್ದು  ರಾತ್ರಿ 10ಗಂಟೆಗೆ ಈ ಕರೆ ಬಂದಿತ್ತು ಎಂದು ಪುಷ್ಪಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
 
ನರೇಂದ್ರ ಮೋದಿ ತಡವಾಗಿ ಕರೆ ಮಾಡಿದ್ದಕ್ಕೆ ಕ್ಷಮಾಪಣೆ ಕೇಳಿ ತಾವು ನಿತಿನ್ ಗಡ್ಕರಿ ಜತೆ ಸಭೆ ನಡೆಸಿದ್ದಾಗಿಯೂ ರಾಷ್ಟ್ರೀಯ ಹೆದ್ದಾರಿ 208-ಎ ದುರಸ್ತಿಗೆ ಅವರ ನೆರವು ಬೇಕೆಂದು ಹೇಳಿದರು. ಯೋಜನೆ ಮೇಲ್ವಿಚಾರಣೆಗೆ ಎಲ್ಲಾ ನೆರವನ್ನು ಒದಗಿಸುವುದಾಗಿ ಪ್ರಧಾನಿ ಭರವಸೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ಮೊಬೈಲ್‌ನಲ್ಲಿ ಪತ್ನಿ ಫೋಟೋ: ಪತಿ ಏನ್ ಮಾಡ್ದ ಗೊತ್ತಾ?