ನವದಹಲಿ: ಮೊದಲು ದುರಂಹಕಾರಿ ನರೇಂದ್ರ ಮೋದಿಯನ್ನು ಸೋಲಿಸೋಣ. ಆಮೇಲೆ ನಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ತೀರ್ಮಾನ ಮಾಡೋಣ ಎಂದಿದ್ದಾರೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ.
ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಕೇಳಿಬರುತ್ತಿದೆ. ಇಂಡಿಯಾ ಒಕ್ಕೂಟದ ಸಭೆಯಲ್ಲಿ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ದಲಿತ ಪಿಎಂ ಅಭ್ಯರ್ಥಿಯಾಗಲಿ ಎಂದು ಸೂಚಿಸಿದ್ದೇ ತಡ. ಮಲ್ಲಿಕಾರ್ಜುನ ಖರ್ಗೆಯೇ ನಮ್ಮ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಕೂಗು ಕೇಳಿಬಂದಿದೆ.
ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರು ಪ್ರತಿಕ್ರಿಯಿಸಿದ್ದು, ಸದ್ಯಕ್ಕೆ ನಮಗೆ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಪ್ರಶ್ನೆಯಲ್ಲ. ಈ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿ ಬಗ್ಗೆ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಮೋದಿ ದುರಂಹಕಾರಿಯಾಗಿದ್ದಾರೆ, ತಮಗೆ ಮಾತ್ರ ಈ ದೇಶ ಆಳಲು ಯೋಗ್ಯತೆಯಿದೆ ಎಂದು ಅಂದುಕೊಂಡಿದ್ದಾರೆ. ಮೊದಲು ಅವರನ್ನು ಸೋಲಿಸಬೇಕು ಎಂದಿದ್ದಾರೆ.
ಮೋದಿಯನ್ನು ಸಶಕ್ತವಾಗಿ ಎದುರಿಸಲು ಒಬ್ಬ ಪ್ರಬಲ ನಾಯಕನ ಅಗತ್ಯವಿದೆ. ಅದಕ್ಕೆ ಮಲ್ಲಿಕಾರ್ಜುನ ಖರ್ಗೆಯೇ ಸೂಕ್ತ ಎಂಬ ಅಭಿಪ್ರಾಯ ವಿಪಕ್ಷಗಳಲ್ಲಿವೆ.