Select Your Language

Notifications

webdunia
webdunia
webdunia
webdunia

ಚೀನಾದ ಕಾಲೇಜುಗಳಲ್ಲಿ ಕಿಸ್ಸಿಂಗ್ ನಿಷೇಧಿಸಿ ಸರಕಾರ ಆದೇಶ

ಚೀನಾದ ಕಾಲೇಜುಗಳಲ್ಲಿ ಕಿಸ್ಸಿಂಗ್ ನಿಷೇಧಿಸಿ ಸರಕಾರ ಆದೇಶ
bejing , ಬುಧವಾರ, 20 ಡಿಸೆಂಬರ್ 2023 (10:05 IST)
ಚೀನಾದ ವಿಶ್ವವಿದ್ಯಾನಿಲಯವೊಂದು ವಿದ್ಯಾರ್ಥಿ ಪ್ರೇಮಿಗಳ  ಜೋಡಿಗೆ ಪರಸ್ಪರ ಕೈಹಿಡಿದುಕೊಳ್ಳಲು, ಭುಜದ ಮೇಲೆ ಪರಸ್ಪರ ಕೈಹಾಕುವುದಕ್ಕೆ ಮತ್ತು ಕ್ಯಾಂಟೀನ್‌ನಲ್ಲಿ ಪರಸ್ಪರ ಆಹಾರ ತಿನ್ನಿಸುವುದನ್ನು ನಿಷೇಧಿಸಿದೆ.

ಹೊಸ ನಡವಳಿಕೆ ಸಂಹಿತೆಯನ್ನು ಛಾಂಗ್ಸಾ ನಗರದಲ್ಲಿ ಜಿಲಿನ್ ನಿರ್ಮಾಣ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಮತ್ತು ಚೀನಾದ ಸಾಮಾಜಿಕ ಜಾಲತಾಣದ ಬಳಕೆದಾರರ ಅಪಹಾಸ್ಯಕ್ಕೆ ಗುರಿಯಾಗಿದೆ. 

ವಿದ್ಯಾರ್ಥಿಗಳಲ್ಲಿ ನಾಗರಿಕ ಗುಣಗಳನ್ನು ಬೆಳೆಸಲು ಈ ಕಟ್ಟುಪಾಡುಗಳನ್ನು ವಿಧಿಸಲಾಗಿದೆ ಎಂದು ಶಿಕ್ಷಕರೊಬ್ಬರು ಹೇಳಿದರು.   ವಿಶ್ವವಿದ್ಯಾನಿಲಯದ ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳ ನಡವಳಿಕೆ ಕುರಿತು ಈ ನಿಯಮಗಳು ವಿಶೇಷ ಗಮನಹರಿಸಿದ್ದು, ಅಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗಿದೆ. 
 
ಪರಸ್ಪರ ಪ್ರೀತಿಸುವ ಜೋಡಿಯ ಜತೆ  ಖಾಸಗಿ ಸಂಭಾಷಣೆ ನಡೆಸಿ ದೈಹಿಕ ಸಂಪರ್ಕ ಹೊಂದದಂತೆ ಅಥವಾ ಕ್ಯಾಂಪಸ್‌ನಲ್ಲಿ ಅಸಹಜವಾಗಿ ವರ್ತಿಸದಂತೆ ಸೂಚಿಸಿದೆ. 
 
ಸಬ್ ವೇ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ  ಚುಂಬನ, ಆಲಿಂಗನ ಮುಂತಾದ ಅಶ್ಲೀಲ ನಡವಳಿಕೆಯನ್ನು ಮಾಧ್ಯಮ ಬಹಿರಂಗ ಮಾಡಿದೆ. ಕ್ಯಾಂಟೀನ್‌ನಲ್ಲಿ ಇಂತಹ ಬೆಳವಣಿಗೆ ಕಂಡುಬಂದರೆ ನಾವು ಸಹಿಸುವುದಿಲ್ಲ ಎಂದು ಶಿಕ್ಷಕರೊಬ್ಬರು ಹೇಳಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಆರೆಸ್ಸೆಸ್ ಬೆಳೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ವೈದ್ಯ