Publish Date: Tue, 19 Dec 2023 (09:40 IST)
Updated Date: Tue, 19 Dec 2023 (09:55 IST)
ಕರಾಚಿ: ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಷನ ಮಾಡಲಾಗಿದ್ದು, ಕರಾಚಿಯ ಆಸ್ಪತ್ರೆಯೊಂದರಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗುತ್ತಿದೆ.
ಸದ್ಯಕ್ಕೆ ದಾವೂದ್ ಗೆ ಕರಾಚಿಯ ಅಗಾ ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಆತನ ಬಳಿ ಯಾರೂ ಹೋಗದಂತೆ ಆಸ್ಪತ್ರೆಯ ಒಂದು ಮಹಡಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಆ ಮಹಡಿಯಲ್ಲಿ ಆತನೊಬ್ಬನೇ ರೋಗಿ. ಆಸ್ಪತ್ರೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎನ್ನಲಾಗಿದೆ.
ಪಾಕ್ ದಾವೂದ್ ಆರೋಗ್ಯ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ಹೊರಹೋಗದಂತೆ ಕಟ್ಟೆಚ್ಚರ ವಹಿಸುತ್ತಿದೆ. ಇದಕ್ಕಾಗಿ ಅಲ್ಲಿ ಇಂಟರ್ ನೆಟ್ ಸೌಲಭ‍್ಯವನ್ನೂ ಕಡಿತಗೊಳಿಸಲಾಗಿದೆ ಎಂಬ ಮಾಹಿತಿಯಿದೆ.
ಹಾಗಿದ್ದರೆ ದಾವೂದ್ ಗೆ ವಿಷವುಣಿಸಿದವರು ಯಾರು? ಕಳೆದ ಕೆಲವು ದಿನಗಳಿಂದ ಭಾರತದ ಮೋಸ್ಟ್ ವಾಂಟೆಡ್ ಉಗ್ರರನ್ನು ಒಬ್ಬೊಬ್ಬರನ್ನಾಗಿ ಅಪರಿಚಿತ ತಂಡ ಸುಳಿವೇ ಸಿಗದಂತೆ ಮುಗಿಸುತ್ತಿದೆ. ಇದೀಗ ದಾವೂದ್ ನ ಹತ್ಯೆಗೂ ಅದೇ ತಂಡವೇ ಕಾರ್ಯಾಚರಣೆ ಮಾಡಿರಬಹುದು ಎಂಬ ಗುಮಾನಿ ಹರಡಿದೆ. ಆದರೆ ಇದುವರೆಗೆ ಎಲ್ಲಾ ಉಗ್ರರನ್ನು ಅಪರಿಚಿತ ತಂಡ ಗುಂಡಿಕ್ಕಿ ಕೊಂದಿತ್ತು. ಆದರೆ ದಾವೂದ್ ಗೆ ವಿಷಪ್ರಾಷನ ಮಾಡಿರುವುದು ನಿಗೂಢವಾಗಿದೆ.