Publish Date: Sat, 13 Aug 2022 (07:50 IST)
Updated Date: Sat, 13 Aug 2022 (08:00 IST)
ಮುಂಬೈ: ಅಮೀರ್ ಖಾನ್ ಸಿನಿಮಾ ಮಾಡುವುದು ಅಪರೂಪ. ಆದರೆ ಮಾಡಿದರೆ ಅವರ ಸಿನಿಮಾಗಳು ಕೋಟಿ ಕೋಟಿ ಬಾಚಿಕೊಳ್ಳುತ್ತವೆ. ಆದರೆ ಇದೀಗ ಲಾಲ್ ಸಿಂಗ್ ಛಡ್ಡಾ ಆ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ.
ದೇಶದಾದ್ಯಂತ ಬಿಡುಗಡೆಯಾದ ಲಾಲ್ ಸಿಂಗ್ ಛಡ್ಡಾ ಮೊದಲನೆಯ ದಿನದ ಕಲೆಕ್ಷನ್ ಕೇವಲ 10 ರಿಂದ 11 ಕೋಟಿ ಅಷ್ಟೇ. ಸಾಮಾನ್ಯವಾಗಿ ಅವರ ಸಿನಿಮಾ ಮೊದಲ ದಿನ 30 ಕೋಟಿ ರೂ.ವರೆಗೆ ಗಳಿಕೆ ಮಾಡುತ್ತವೆ.
ಆದರೆ 180 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಲಾಲ್ ಸಿಂಗ್ ಛಡ್ಡಾ ಮೊದಲ ದಿನ ಗಳಿಸಿದ್ದು ಕೇವಲ 11 ಕೋಟಿ ಎನ್ನಲಾಗುತ್ತಿದೆ. ಕಳೆದ 13 ವರ್ಷಗಳಲ್ಲೇ ಅಮೀರ್ ಸಿನಿಮಾವೊಂದು ಇಷ್ಟು ಕಡಿಮೆ ಗಳಿಸಿದ್ದು ಇದೇ ಮೊದಲು. ಇದರೊಂದಿಗೆ ಮತ್ತೊಂದು ಬಾಲಿವುಡ್ ಸಿನಿಮಾ ನೆಲ ಕಚ್ಚಿದಂತಾಗಿದೆ. ಪಿ ಕೆ ಸಿನಿಮಾದಲ್ಲಿ ಹಿಂದೂ ದೇವರಿಗೆ ಅವಮಾನ ಮಾಡಿದ್ದ ದೃಶ್ಯಗಳನ್ನು ಮುಂದಿಟ್ಟುಕೊಂಡು ನೆಟ್ಟಿಗರು ಅವರ ಸಿನಿಮಾ ಬಹಿಷ್ಕರಿಸಲು ಕರೆ ಕೊಟ್ಟಿದ್ದರು. ಇದು ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರಿದೆ.