Select Your Language

Notifications

webdunia
webdunia
webdunia
webdunia

ಲಾಲ್ ಸಿಂಗ್ ಛಡ್ಡಾ ಖಾಲಿ ಖಾಲಿ, ಗಾಳಿಪಟ 2 ಸೀಟ್ ಫುಲ್

ಲಾಲ್ ಸಿಂಗ್ ಛಡ್ಡಾ ಖಾಲಿ ಖಾಲಿ, ಗಾಳಿಪಟ 2 ಸೀಟ್ ಫುಲ್
ಬೆಂಗಳೂರು , ಶುಕ್ರವಾರ, 12 ಆಗಸ್ಟ್ 2022 (08:50 IST)
ಬೆಂಗಳೂರು: ಬಾಲಿವುಡ್ ನ ಘಟಾನುಘಟಿಗಳ ಸಿನಿಮಾ ಬಿಡುಗಡೆಯಾದರೆ ಸ್ಥಳೀಯ ಸಿನಿಮಾಗಳು ನೆಲಕಚ್ಚುವ ಉದಾಹರಣೆಗಳಿತ್ತು. ಆದರೆ ಅದೆಲ್ಲಾ ಈಗ ಉಲ್ಟಾ ಆಗಿದೆ.

ಅಮೀರ್ ಖಾ‍ನ್ ನಂತಹ ಘಟಾನುಘಟಿ ನಾಯಕ ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿರುವ ಲಾಲ್ ಸಿಂಗ್ ಛಡ್ಡಾ ಸಿನಿಮಾ ಥಿಯೇಟರ್ ನಲ್ಲಿ ಪ್ರೇಕ್ಷಕರಿಲ್ಲದೇ ಖಾಲಿ ಹೊಡೆಯುತ್ತಿದ್ದರೆ, ಇತ್ತ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಗಾಳಿಪಟ 2 ಸಿನಿಮಾಗೆ ಕರ್ನಾಟಕದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

ಯೋಗರಾಜ್ ಭಟ್ ನಿರ್ದೇಶನದ ಸಿನಿಮಾ ಎದುರು ಈಗ ಲಾಲ್ ಸಿಂಗ್ ಛಡ್ಡಾ ಕರ್ನಾಟಕದಲ್ಲಿ ನೆಲಕಚ್ಚುವುದು ಗ್ಯಾರಂಟಿಯಾಗಿದೆ. ಮೊದಲ ದಿನವೇ ಅಮೀರ್ ಸಿನಿಮಾಗೆ ಬುಕಿಂಗ್ ಗೆ ನೀರಸ ಪ್ರತಿಕ್ರಿಯೆ ಬಂದಿತ್ತು. ಇದು ಕನ್ನಡ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ