Publish Date: Thu, 11 Aug 2022 (12:18 IST)
Updated Date: Thu, 11 Aug 2022 (12:20 IST)
ಮೈಸೂರು: ಕೆಜಿಎಫ್ 2 ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಕಡಿಮೆ. ಇಂದು ಮೈಸೂರಿಗೆ ಆಗಮಿಸಿದ್ದಾರೆ.
ಇಂದು ಮೈಸೂರಿನಲ್ಲಿ 75 ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರ ಯುವಜನ ಮಹೋತ್ಸವ ನಡೆಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ನಟ ಯಶ್ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.
ಯಶ್ ಆಗಮನ ಹಿನ್ನಲೆಯಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಜನ ಕಿಕ್ಕಿರಿದು ನಿಂತಿದ್ದಾರೆ. ಮೈಸೂರು ವಿವಿಯ ಇಂಜಿನಿಯರಿಂಗ್ ಬ್ಲಾಕ್ ಉದ್ಘಾಟನೆ ಕಾರ್ಯಕ್ರಮವನ್ನು ಯಶ್ ನೆರವೇರಿಸಲಿದ್ದಾರೆ. ಯಶ್ ಬಹಳ ದಿನಗಳ ನಂತರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುತ್ತಿದ್ದು ಅವರನ್ನು ನೋಡಲು ಜನ ಕಾತುರದಿಂದ ಕಾದಿದ್ದಾರೆ.
Krishnaveni K
Publish Date: Thu, 11 Aug 2022 (12:18 IST)
Updated Date: Thu, 11 Aug 2022 (12:20 IST)