Select Your Language

Notifications

webdunia
webdunia
webdunia
webdunia

ಮಕ್ಕಳಿಗೆ ಇಷ್ಟವಾಗುವ ಮತ್ತೊಂದು ಸಿನಿಮಾ ಘೋಷಿಸಿದ ರಕ್ಷಿತ್ ಶೆಟ್ಟಿ

ಮಕ್ಕಳಿಗೆ ಇಷ್ಟವಾಗುವ ಮತ್ತೊಂದು ಸಿನಿಮಾ ಘೋಷಿಸಿದ ರಕ್ಷಿತ್ ಶೆಟ್ಟಿ
ಬೆಂಗಳೂರು , ಬುಧವಾರ, 10 ಆಗಸ್ಟ್ 2022 (16:15 IST)
ಬೆಂಗಳೂರು: 777 ಚಾರ್ಲಿ ಸಿನಿಮಾ ಮೂಲಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕೂತು ವೀಕ್ಷಿಸಬಹುದಾದ ಸಿನಿಮಾ ಮಾಡಿದ್ದ ರಕ್ಷಿತ್ ಶೆಟ್ಟಿ ಈಗ ತಮ್ಮ ಪರಂವಾ ನಿರ್ಮಾಣ ಸಂಸ್ಥೆ ಮೂಲಕ ಮತ್ತೆ ಮಕ್ಕಳಿಗೆ ಇಷ್ಟವಾಗುವ ಸಿನಿಮಾ ಮಾಡಲು ಹೊರಟಿದ್ದಾರೆ.

ನವ ನಿರ್ದೇಶಕರಿಗೆ ಅವಕಾಶ ಕೊಡುವ ರಕ್ಷಿತ್ ಈ ಬಾರಿ ಮತ್ತೆ ಹೊಸಬರಿಗೆ ಮಣೆ ಹಾಕಿದ್ದಾರೆ. ಸುಮಂತ್ ಭಟ್ ನಿರ್ದೇಶಿಸಲಿರುವ ಹುಡುಗನೊಬ್ಬನ ಭಾವನಾತ್ಮಕ ಪಯಣದ ಕತೆ ಹೊಂದಿರುವ ಸಿನಿಮಾಗೆ ರಕ್ಷಿತ್ ಬಂಡವಾಳ ಹಾಕಲಿದ್ದಾರೆ. ಈ ಸಿನಿಮಾಗೆ ‘ಮಿಥ್ಯ’ ಎಂದು ಹೆಸರಿಡಲಾಗಿದೆ.

ಒಂದು ಎಳೇ ಹೃದಯ ನೋವನ್ನು ಹೇಗೆ ತಡೆದುಕೊಳ್ಳುತ್ತದೆ? ಈ ಪ್ರಶ್ನೆಗೆ ಈ ಕತೆ ಉತ್ತರವಾಗಲಿದೆ. ಇದು ಭಾವನಾತ್ಮಕ ಕತೆ. ಈ ಕತೆಯನ್ನು ಕೇಳುವಾಗ ನನ್ನ ಹೃದಯಕ್ಕೆ ತಟ್ಟಿತು ಎಂದು ರಕ್ಷಿತ್ ಹೇಳಿಕೊಂಡಿದ್ದಾರೆ. ಆ ಮೂಲಕ ಮತ್ತೊಂದು ವಿಭಿನ್ನ ಸಿನಿಮಾವನ್ನು ತೆರೆಗೆ ತರಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಗಂಡಸರ ಬಳಿ ಸೆಕ್ಸ್ ಬಯಸಿ ಬಂದರೆ ಅಪರಾಧ: ಶಕ್ತಿಮಾನ್ ನಟ ಮುಖೇಶ್ ಖನ್ನಾ ವಿವಾದಿತ ಹೇಳಿಕೆ