Publish Date: Wed, 10 Aug 2022 (08:20 IST)
Updated Date: Wed, 10 Aug 2022 (08:55 IST)
ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ಜೇಮ್ಸ್ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದ್ವಿತ ಸಿನಿಮಾ ಮಾಡಬೇಕಿತ್ತು. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಪವನ್ ಕುಮಾರ್ ನಿರ್ದೇಶನದ ದ್ವಿತ ಸಿನಿಮಾ ಘೋಷಣೆಯಾಗಿ ಪೋಸ್ಟರ್ ಕೂಡಾ ಬಿಡುಗಡೆಯಾಗಿತ್ತು.
ಆದರೆ ಅಷ್ಟರಲ್ಲೇ ಪುನೀತ್ ನಮ್ಮನ್ನಗಲಿದರು. ಇದರಿಂದಾಗಿ ದ್ವಿತ ಪ್ರಾಜೆಕ್ಟ್ ಅರ್ಧಕ್ಕೇ ನಿಂತು ಹೋಯಿತು. ಆದರೆ ಈ ಸಿನಿಮಾವನ್ನು ಪವನ್ ಕೈ ಬಿಟ್ಟಿಲ್ಲ. ದ್ವಿತ ಸಿನಿಮಾವನ್ನು ಮತ್ತೊಬ್ಬ ನಾಯಕನನ್ನು ಹಾಕಿಕೊಂಡು ಮಾಡಲು ತಯಾರಿ ನಡೆಸಿದ್ದಾರಂತೆ.
ಇತ್ತೀಚೆಗೆ ಫಹಾದ್ ಫಾಸಿಲ್ ಬರ್ತ್ ಡೇಗೆ ಹೊಂಬಾಳೆ ಸಿನಿಮಾ ಶುಭಾಷಯ ಕೋರಿ ಅವರ ಜೊತೆಗೆ ಸಿನಿಮಾ ಮಾಡಲಿರುವ ಸುಳಿವು ನೀಡಿತ್ತು. ಹೀಗಾಗಿ ಪುನೀತ್ ಮಾಡಬೇಕಾಗಿದ್ದ ದ್ವಿತ ಸಿನಿಮಾವನ್ನು ಫಹಾದ್ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಇದಕ್ಕೂ ಮೊದಲು ಪವನ್ ನಿರ್ದೇಶನದ ಲೂಸಿಯಾ ಸಿನಿಮಾವನ್ನು ಫಹಾದ್ ಮೆಚ್ಚಿಕೊಂಡಿದ್ದರು. ಹೀಗಾಗಿ ಪವನ್ ಜೊತೆ ಕೆಲಸ ಮಾಡಲು ಫಹಾದ್ ಕೂಡಾ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.