ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರವಿಬೋಪಣ್ಣ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ.
ಈ ಕಾರ್ಯಕ್ರಮದಲ್ಲಿ ಸುದೀರ್ಘವಾಗಿ ಮಾತನಾಡಿರುವ ನವರಸನಾಯಕ ಜಗ್ಗೇಶ್, ರವಿಚಂದ್ರನ್ ಅವರ ಬಗ್ಗೆ ಮತ್ತು ಅವರ ಈಶ್ವರಿ ಸಂಸ್ಥೆ ಬಗ್ಗೆ ಮಾತನಾಡಿದಾಗ ರವಿಚಂದ್ರನ್ ಭಾವುಕರಾದರು.
ನಮ್ಮಂತಹ ಎಷ್ಟೋ ಕಲಾವಿದರಿಗೆ ಅನ್ನ ಹಾಕಿದ ದೇವರು ನೀವು. ನೀವು ಒಂದು ಆಲದ ಮರದ ರೀತಿ. ಸದಾ ಚಿಗುರುತ್ತಲೇ ಇರುತ್ತೀರಿ. ಆ ದೇವರು ಅಂತಿದ್ದರೆ ನೀವು ಇನ್ನೂ 50 ವರ್ಷ ಬದುಕಿ ನಮ್ಮಂತಹ ಕಲಾವಿದರಿಗೆ ಊಟ ಹಾಕುವ ಶಕ್ತಿ ಭಗವಂತ ಕೊಡುತ್ತಾನೆ ಎಂದು ಜಗ್ಗೇಶ್ ಹೇಳುತ್ತಿದ್ದಂತೇ ರವಿಚಂದ್ರನ್ ಭಾವುಕರಾಗಿ ಕೈ ಮುಗಿದರು.
ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅಲ್ಲದೆ ಈಶ್ವರಿ ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ಮಾಡಿದಂತಹ ಎಲ್ಲಾ ಕಲಾವಿದರೂ ಆಗಮಿಸಿ ರವಿ ಬೋಪಣ್ಣ ಸಿನಿಮಾಗೆ ಶುಭ ಹಾರೈಸಿದ್ದಾರೆ.