Publish Date: Sat, 06 Aug 2022 (09:40 IST)
Updated Date: Sat, 06 Aug 2022 (09:55 IST)
ಬೆಂಗಳೂರು: ಡಾಲಿ ಧನಂಜಯ್ ನಾಯಕರಾಗಿರುವ ಮಾನ್ಸೂನ್ ರಾಗ ಸಿನಿಮಾದ ಟ್ರೈಲರ್ ನಿನ್ನೆ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಬಿಡುಗಡೆಯಾಗಿದೆ.
ಆಗಸ್ಟ್ 19 ರಂದು ತೆರೆಗೆ ಬರುತ್ತಿರುವ ಮಾನ್ಸೂನ್ ರಾಗ ಸಿನಿಮಾ ಈಗಾಗಲೇ ಹಿನ್ನಲೆ ಸಂಗೀತ, ಹಾಡುಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.
ನಿನ್ನೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರೈಲರ್ ನೋಡಿದ ಮೇಲೆ ರಚಿತಾ ರಾಮ್ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ ಎನ್ನುವುದು ಪಕ್ಕಾ ಆಗಿದೆ. ಅವರ ಪ್ರೇಮಿಯಾಗಿ ಡಾಲಿ ಧನಂಜಯ್ ಅಭಿನಯಿಸಿದ್ದಾರೆ. ಇನ್ನು, ಅಚ್ಯುತ್ ಕುಮಾರ್ ಲವ್ವರ್ ಬಾಯ್ ಅವತಾರ, ಹಿರಿಯ ನಟಿ ಸುಹಾಸಿನಿ ವಿಶೇಷ ಪಾತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ಈ ಟ್ರೈಲರ್ ನೋಡಿದ ಮೇಲೆ ಸಿನಿಮಾ ಬಗ್ಗೆ ಇದ್ದ ಕುತೂಹಲ ಮತ್ತಷ್ಟು ಹೆಚ್ಚಾಗಿರುವುದಂತೂ ನಿಜ.