ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಇಂದಿನಿಂದ ಒಟಿಟಿ ವೇದಿಕೆಯಲ್ಲಿ ಹೊಸ ಆವೃತ್ತಿ ಶುರು ಮಾಡಲಿದೆ.
ಇದುವರೆಗೆ ಬಿಗ್ ಬಾಸ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಆದರೆ ಈ ಬಾರಿ ಕನ್ನಡದಲ್ಲಿ ಒಟಿಟಿ ವೇದಿಕೆಯಲ್ಲಿ ದಿನದ 24 ಗಂಟೆಯೂ ಬಿಗ್ ಬಾಸ್ ನೇರಪ್ರಸಾರವಾಗಲಿದೆ. ಈಗಾಗಲೇ ಹಿಂದಿಯಲ್ಲಿ ಒಟಿಟಿ ಆವೃತ್ತಿ ಯಶಸ್ವಿಯಾಗಿ ಪ್ರಸಾರವಾಗಿತ್ತು.
ಇದೇ ಹುಮ್ಮಸ್ಸಿನಲ್ಲಿ ಕನ್ನಡದಲ್ಲೂ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಇದು ಯಾವ ರೀತಿ ಕ್ಲಿಕ್ ಆಗುತ್ತದೆ ಎಂದು ಕಾದುನೋಡಬೇಕಿದೆ. ಎಂದಿನಂತೆ ಕಿಚ್ಚ ಸುದೀಪ್ ನಿರೂಪಣೆ ಮಾಡಲಿದ್ದು, ಒಟ್ಟು 16 ಸ್ಪರ್ಧಿಗಳು ಮನೆಯೊಳಗೆ ಕಾಲಿಡಲಿದ್ದಾರೆ.