ಬೆಂಗಳೂರು: ಕನಸಿನ ರಾಣಿ ಮಾಲಾಶ್ರೀ ಮತ್ತು ನಿರ್ಮಾಪಕ ಕೋಟಿ ರಾಮು ಪುತ್ರಿ ಅನನ್ಯಾಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ನಿರ್ದೇಶಕ ತರುಣ್ ಸುಧೀರ್ ಇನ್ನಿಲ್ಲದಂತೆ ಟ್ರೋಲ್ ಆಗುತ್ತಿದ್ದಾರೆ.
ಅನನ್ಯಾ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ಮೊದಲ ಸಿನಿಮಾದಲ್ಲೇ ಡಿ ಬಾಸ್ ದರ್ಶನ್ ಗೆ ನಾಯಕಿಯಾಗುವ ಅವಕಾಶ ಪಡೆದಿದ್ದಾರೆ. ಮಾಲಾಶ್ರೀ ಪುತ್ರಿ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿಯಾಗಿತ್ತು ನಿಜ.
ಆದರೆ ಚಿಕ್ಕ ಹುಡುಗಿಯನ್ನು ದರ್ಶನ್ ಗೆ ಹೀರೋಯಿನ್ ಮಾಡಿದ್ದೀರಲ್ಲಾ ಎಂದು ನೆಟ್ಟಿಗರು ನಿರ್ದೇಶಕ ತರುಣ್ ಸುಧೀರ್ ರನ್ನು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ತಂಗಿ ರೋಲ್ ಇರಬೇಕು ಎನ್ನುತ್ತಿದ್ದಾರೆ. ಮಾಲಾಶ್ರೀ ಪುತ್ರಿ ಬಗ್ಗೆ ಅಭಿಮಾನಿಗಳಿಗೆ ತಕರಾರು ಇಲ್ಲ. ಆದರೆ ದರ್ಶನ್ ಗೆ ಈ ಹುಡುಗಿ ಸೂಟ್ ಆಗಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.