Publish Date: Fri, 05 Aug 2022 (16:09 IST)
Updated Date: Fri, 05 Aug 2022 (16:12 IST)
ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್ ಬಾಗ್ ನಲ್ಲಿ ಫಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಡಾ.ರಾಜ್ ಕುಮಾರ್ ದಂಪತಿ ಜೊತೆಗೆ ಡಾ. ಪುನೀತ್ ರಾಜ್ ಕುಮಾರ್ ಪುತ್ಥಳಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಡಾ.ರಾಜ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಬೃಹತ್ ಮೂರ್ತಿಯ ಕೆಳಗೆ ಚಿನ್ನದ ಲೇಪನದ ಸುಂದರ ಪುತ್ಥಳಿಯನ್ನು ಇರಿಸಲಾಗಿದೆ.
ಇದೀಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಈ ವರ್ಷ ನಮ್ಮನ್ನಗಲಿದ ಪುನೀತ್ ರಾಜ್ ಕುಮಾರ್ ಗೌರವಾರ್ಥ, ಡಾ.ರಾಜ್ ಕುಟುಂಬದ ಕಲಾ ಸೇವೆಯನ್ನು ಗೌರವಿಸಿ ಈ ಪುತ್ಥಳಿಗಳನ್ನು ಇರಿಸಲಾಗಿದೆ.