Select Your Language

Notifications

webdunia
webdunia
webdunia
webdunia

ಫ್ಯಾನ್ಸ್ ವಾರ್ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೀಡಿದ್ದ ಹೇಳಿಕೆ ಹೀಗಿತ್ತು!

ಫ್ಯಾನ್ಸ್ ವಾರ್ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೀಡಿದ್ದ ಹೇಳಿಕೆ ಹೀಗಿತ್ತು!
ಬೆಂಗಳೂರು , ಬುಧವಾರ, 10 ಆಗಸ್ಟ್ 2022 (08:00 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಮತ್ತು ದರ್ಶನ್ ಅಭಿಮಾನಿಗಳ ನಡುವೆ ಕೆಲವು ದಿನಗಳಿಂದ ಫ್ಯಾನ್ಸ್ ವಾರ್ ನಡೆಯುತ್ತಿದೆ.

ಪುನೀತ್ ಬದುಕಿದ್ದಾಗ ಯಾವ ಸ್ಟಾರ್ ಬಗ್ಗೆಯೂ ತಪ್ಪಾಗಿ ಮಾತನಾಡಿದವರಲ್ಲ. ಎಲ್ಲರ ಜೊತೆ ಚೆನ್ನಾಗಿ ಸಂಬಂಧ ಕಾಪಾಡಿಕೊಂಡು ಬಂದಿದ್ದರು. ಒಂದೊಮ್ಮೆ ಸಂದರ್ಶನದಲ್ಲಿ ಅವರಿಗೆ ಫ್ಯಾನ್ಸ್ ವಾರ್ ಬಗ್ಗೆ ಕೇಳಿದಾಗ ಅವರು ನೀಡಿದ ಉತ್ತರ ಸದಾ ಕಾಲಕ್ಕೂ ಪ್ರಸ್ತುತವಾಗುತ್ತದೆ.

‘ಫ್ಯಾನ್ಸ್ ವಾರ್ ಅಂತ ಏನಿಲ್ಲ. ನಾವು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಬಾರದು, ಯೋಚಿಸಬಾರದು, ಒಳ್ಳೆಯದನ್ನೇ ಹೇಳೋಣ. ಎಲ್ಲರನ್ನೂ ಪ್ರೀತಿಸಬೇಕು, ಗೌರವಿಸಬೇಕು. ಅಷ್ಟೇ.. ಹಾಗಿದ್ದರೆ ಯಾರ ಮಧ್ಯೆಯೂ ಧ್ವೇಷ ಬರಲ್ಲ’ ಎಂದಿದ್ದರು. ಅದನ್ನು ಅವರು ಪಾಲಿಸುತ್ತಾ ಬಂದಿದ್ದ ಕಾರಣಕ್ಕೆ ಅವರನ್ನು ಇಷ್ಟಪಡದ ಕಲಾವಿದರೇ ಚಿತ್ರರಂಗದಲ್ಲಿರಲಿಲ್ಲ. ಇದು ಎಲ್ಲಾ ನಟರಿಗೂ, ಅಭಿಮಾನಿಗಳಿಗೂ ಪಾಠವಾಗಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ನಟ ರಾಣಾ ದಗ್ಗುಬಟ್ಟಿ ವೈವಾಹಿಕ ಜೀವನ ಅಂತ್ಯ?