ನವದೆಹಲಿ: ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ಶಕ್ತಿಮಾನ್ ಧಾರವಾಹಿ ಖ್ಯಾತಿಯ ನಟ ಮುಖೇಶ್ ಖನ್ನಾ ಮಹಿಳೆಯರ ಬಗ್ಗೆ ವಿವಾದಿತ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಒಂದು ವೇಳೆ ಮಹಿಳೆಯರು ಗಂಡಸರ ಬಳಿ ಹೋಗಿ ಸೆಕ್ಸ್ ಬೇಕೆಂದು ನೇರವಾಗಿ ಕೇಳಿದರೆ ಅವಳು ಮಹಿಳೆಯೇ ಅಲ್ಲ, ಅವಳು ಅಪರಾಧ ಮಾಡುತ್ತಿದ್ದಾಳೆ ಎಂದರ್ಥ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಈಗ ಭಾರೀ ಟ್ರೋಲ್ ಗೊಳಗಾಗಿದೆ. ನೀವಿನ್ನೂ ಯಾವ ಶತಮಾನದಲ್ಲಿದ್ದೀರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ನೀವಿನ್ನೂ ಹುಚ್ಚು ಸಂಪ್ರದಾಯಗಳಲ್ಲೇ ಜೀವನ ಮಾಡಿ ಎಂದು ಕಿಡಿ ಕಾರಿದ್ದಾರೆ.
ಈ ಹಿಂದೊಮ್ಮೆ ಮಹಿಳೆಯರು ಮನೆಯಿಂದ ಹೊರಗೆ ಹೋಗುವುದೇ ಅಪರಾಧ ಎಂದು ಹೇಳಿಕೆ ನೀಡಿ ಮುಖೇಶ್ ಖನ್ನಾ ವಿವಾದಕ್ಕೊಳಗಾಗಿದ್ದರು. ಇದೀಗ ಮತ್ತೆ ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟು ಟೀಕೆಗೊಳಗಾಗಿದ್ದಾರೆ.