Publish Date: Fri, 12 Aug 2022 (20:13 IST)
Updated Date: Fri, 12 Aug 2022 (20:15 IST)
1992ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ಬೆಳ್ಳಿ ಕಾಲುಂಗುರ ಇಂದಿಗೂ ಜನರ ಅಚ್ಚುಮೆಚ್ಚಿನ ಸಿನಿಮಾಗಳಲ್ಲಿ ಒಂದು. ಮಾಲಾಶ್ರೀ ಅಭಿನಯದ ಈ ಸಿನಿಮಾ ಈಗ ಮತ್ತೊಮ್ಮೆ ಸುದ್ದಿಯಾಗಿದ್ದು, ಇದೇ ಟೈಟಲ್ನಲ್ಲಿ ಹೊಸ ಸಿನಿಮಾ ಒಂದು ಸೆಟ್ಟೇರುತ್ತಿದೆ. ಕನಸಿನ ರಾಣಿ ಮಾಲಾಶ್ರೀ, ಸುನಿಲ್ ಅಭಿನಯದ ಸಂಗೀತಮಯ ಸಿನಿಮಾ ಈಗ 30 ವರ್ಷಗಳ ನಂತರ ಮತ್ತೆ ಅದೇ ಟೈಟಲ್ನಲ್ಲಿ ಹೊಸ ಸಿನಿಮಾ ಸೆಟ್ಟೇರುತ್ತಿದೆ. H. ವಾಸ್ ನಿರ್ದೇಶನದ ಧನ್ಯಾ ರಾಮ್ ಅಭಿನಯದ ಚಿತ್ರಕ್ಕೆ "ಬೆಳ್ಳಿ ಕಾಲುಂಗುರ" ಟೈಟಲ್ ನೀಡಲಾಗಿದೆ. ಕಂಠೀರವ ಸ್ಟೂಡಿಯೋದಲ್ಲಿ ಅದ್ದೂರಿಯಾಗಿ ಬೆಳ್ಳಿ ಕಾಲುಂಗುರ ಸೆಟ್ಟೇರುತ್ತಿದ್ದು ಬೆಳ್ಳಿ ಕಾಲುಂಗುರ ಚಿತ್ರದ ಮುಹೂರ್ತಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ಳಿಕಾಲುಂಗುರ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಇನ್ನು ಚಿತ್ರದಲ್ಲಿ ಸಮರ್ಥ್ ಹಾಗೂ ಧನ್ಯಾ ಅಭಿನಯಿಸ್ತಿದ್ದಾರೆ. ಧನ್ಯಾ ರಾಜ್ ಕುಮಾರ್ ಅವರು ಡಾ.ರಾಜ್ ಕುಮಾರ್ ಮೊಮ್ಮಗಳು. ರಾಜ್ ಕುಮಾರ್ ಅವರ ರಕ್ತದಲ್ಲೇ ಕಲೆ ಇದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ನವರು ಹೇಳಿದ್ರು.