Publish Date: Fri, 12 Aug 2022 (20:09 IST)
Updated Date: Fri, 12 Aug 2022 (20:12 IST)
ಕ್ರೇಜಿಸ್ಟಾರ್ ವಿ. ರವಿಚಂದ್ರನ್ ನಟನೆ ಮತ್ತು ನಿರ್ದೇಶನದ “ರವಿ ಬೋಪಣ್ಣ ಸಿನಿಮಾ ಈ ವಾರ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ “ರವಿ ಬೋಪಣ್ಣ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಬರೋಬ್ಬರಿ 7 ನಿಮಿಷ ಅವಧಿಯ ಟ್ರೇಲರ್‌ನಲ್ಲಿ, ರವಿಚಂದ್ರನ್ ಮೂರು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾಗಿ ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ ಗ್ಲಾಮರಸ್ ಆಗಿ ತೆರೆಮೇಲೆ ಮಿಂಚಿದ್ದು, ನಟ ಕಿಚ್ಚ ಸುದೀಪ್ ಕೂಡ ಚಿತ್ರದಲ್ಲಿ ಕರಿಕೋಟು ತೊಟ್ಟು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಷ್ಟು ಖಡಕ್ ಡೈಲಾಗ್ಸ್, ಎಮೋಶನ್ ದೃಶ್ಯಗಳು, ಸಸ್ಪೆನ್ಸ್ ಕಂ ಥ್ರಿಲ್ಲರ್ ಶೈಲಿಯ ಕಥೆ ಹೀಗೆ ಒಂದಷ್ಟು ಝಲಕ್ “ರವಿ ಬೋಪಣ್ಣನ ಟ್ರೇಲರ್‌ನಲ್ಲಿ ಕಾಣುತ್ತದೆ. ಇಡೀ ಸಿನಿಮಾದಲ್ಲಿ ಎರಡು ಗಂಟೆಗಳ ಕಾಲ ರವಿಚಂದ್ರನ್ ಇದ್ದಿದ್ದರೆ, ಸುದೀಪ್ 5 ನಿಮಿಷ ಮಾತ್ರ ಇರುತ್ತಾರೆ. ಆದ್ರೆ ಅವರ ವಾಯ್ಸ್ ಇಡೀ ಸಿನಿಮಾವನ್ನು ಜಸ್ಟಿಫೈ ಮಾಡುತ್ತದಂತೆ