Select Your Language

Notifications

webdunia
webdunia
webdunia
webdunia

ಅನಿಕಾ ಮದುವೆಯಾಗ್ತಿರೋದು ಶಂಭುನಾ! ಕಮಲಿ ಧಾರವಾಹಿಯ ನಟ-ನಟಿ ಈಗ ರಿಯಲ್ ಲೈಫ್ ಜೋಡಿ

ಅನಿಕಾ ಮದುವೆಯಾಗ್ತಿರೋದು ಶಂಭುನಾ! ಕಮಲಿ ಧಾರವಾಹಿಯ ನಟ-ನಟಿ ಈಗ ರಿಯಲ್ ಲೈಫ್ ಜೋಡಿ
ಬೆಂಗಳೂರು , ಶುಕ್ರವಾರ, 12 ಆಗಸ್ಟ್ 2022 (17:11 IST)
ಬೆಂಗಳೂರು: ಸಿನಿಮಾಗಳಂತೇ ಧಾರವಾಹಿಗಳಲ್ಲೂ ಕಲಾವಿದರು ರಿಯಲ್ ಲೈಫ್ ನಲ್ಲೂ ಜೋಡಿಯಾದ ಅನೇಕ ಉದಾಹರಣೆಗಳಿವೆ. ಇದೀಗ ಕಮಲಿ ಧಾರವಾಹಿಯ ಅನಿಕಾ ಖ್ಯಾತಿಯ ರಚನಾ ಗ್ಯಾಬ್ರಿಯಾಲ ಸ್ಮಿತ್ ಮತ್ತು ಸುಹಾಸ್ ಹಸೆಮಣೆ ಏರಲಿದ್ದಾರೆ.
 

ಅನಿಕಾ ವಿವಾಹ ನಿಶ್ಚಿತಾರ್ಥ ಮಾಡಿಕೊಂಡ ಬಗ್ಗೆ ನಿನ್ನೆಯಷ್ಟೇ ಸುದ್ದಿಯಾಗಿದೆ. ಅವರು ನಿಶ್ಚಿತಾರ್ಥ ಮಾಡಿಕೊಂಡಿರುವುದು ಕಮಲಿ ಧಾರವಾಹಿಯಲ್ಲಿ ಶಂಭು ಪಾತ್ರ ಮಾಡುತ್ತಿರುವ ನಟ ಸುಹಾಸ್ ಜೊತೆ. ಸುಹಾಸ್ ಕೂಡಾ ಅನೇಕ ಧಾರವಾಹಿಗಳ ಜೊತೆ ವಾಯ್ಸ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.

ಇಬ್ಬರೂ ಕಮಲಿ ಧಾರವಾಹಿ ಸಂದರ್ಭದಲ್ಲಿ ಭೇಟಿಯಾಗಿ ಪರಸ್ಪರ ಪ್ರೀತಿಸಲು ಶುರು ಮಾಡಿದ್ದಾರೆ. ಇದೀಗ ಎಂಗೇಜ್ ಮಾಡಿಕೊಂಡಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಇತ್ತೀಚೆಗಷ್ಟೇ ಕಮಲಿ ಧಾರವಾಹಿಯಲ್ಲಿ ನಟಿಸುತ್ತಿದ್ದ ನಿಂಗಿ ಪಾತ್ರಧಾರಿ ಅಂಕಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮತ್ತೊಂದು ಜೋಡಿ ಮದುವೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಲ್ ಸಿಂಗ್ ಛಡ್ಡಾ ಖಾಲಿ ಖಾಲಿ, ಗಾಳಿಪಟ 2 ಸೀಟ್ ಫುಲ್