Publish Date: Tue, 02 Aug 2022 (08:50 IST)
Updated Date: Tue, 02 Aug 2022 (09:18 IST)
ಬೆಂಗಳೂರು: ಕನ್ನಡದ ಖ್ಯಾತ ಕಿರುತೆರೆ ನಟ ಚಂದನ್ ಕುಮಾರ್ ತೆಲುಗಿನ ಧಾರವಾಹಿ ಶೂಟಿಂಗ್ ಸೆಟ್ ನಲ್ಲಿ ಹಲ್ಲೆಗೊಳಗಾದ ವಿಡಿಯೋ ಭಾರೀ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಹಲವರು ತೆಲುಗು ಧಾರವಾಹಿ ರಂಗಕ್ಕೆ ಕನ್ನಡ ನಟರು ಹೋಗೋದ್ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಕನ್ನಡದ ಹಲವಾರು ನಟರು ತೆಲುಗು ಧಾರವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ.
ತೆಲುಗಿನ ಧಾರವಾಹಿ ರೀಚ್ ಹೆಚ್ಚು. ಹೀಗಾಗಿ ಜನಪ್ರಿಯತೆಯ ಕಾರಣಕ್ಕೆ ಕನ್ನಡ ನಟರು ತೆಲುಗು ರಂಗಕ್ಕೆ ಎಂಟ್ರಿ ಕೊಡುತ್ತಾರೆ. ಇನ್ನೊಂದು ಪ್ರಮುಖ ಅಂಶವೆಂದರೆ ಕನ್ನಡ ಚಿತ್ರರಂಗಕ್ಕೆ ಹೋಲಿಸಿದರೆ ತೆಲುಗಿನಲ್ಲಿ ಸಂಭಾವನೆ ಹೆಚ್ಚು. ಹೀಗಾಗಿ ತೆಲುಗು ಕಿರುತೆರೆ ಲೋಕಕ್ಕೆ ಕನ್ನಡದ ಬಹುತೇಕ ನಟರು ಜಾರುವುದು ಸಹಜ.