Select Your Language

Notifications

webdunia
webdunia
webdunia
webdunia

ಕಿರುತೆರೆ ನಟ ಚಂದನ್ ಕುಮಾರ್ ಗೆ ತೆಲುಗು ಸೀರಿಯಲ್ ಸೆಟ್ ನಲ್ಲಿ ಹಲ್ಲೆ?! ವಿಡಿಯೋ ವೈರಲ್

ಚಂದನ್ ಕುಮಾರ್
ಹೈದರಾಬಾದ್: ಕನ್ನಡ ಕಿರುತೆರೆಯ ಖ್ಯಾತ ನಟ ಚಂದನ್ ಕುಮಾರ್ ಗೆ ತೆಲುಗಿನಲ್ಲಿ ಸಾವಿತ್ರಮ್ಮ ಗಾರಿ ಅಬ್ಬಾಯಿ ಸೆಟ್ ನಲ್ಲಿ ಹಲ್ಲೆ ನಡೆದಿದೆ ಎಂಬ ವಿಡಿಯೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮಾ, ಮನಸೆಲ್ಲಾ ನೀನೇ ಎಂಬಿತ್ಯಾದಿ ಧಾರವಾಹಿಗಳಲ್ಲಿ ನಟಿಸಿದ್ದಲ್ಲದೆ ಸಿನಿಮಾದಲ್ಲೂ ಅಭಿನಯಿಸಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಚಂದನ್ ತೆಲುಗು ಧಾರವಾಹಿಗಳಲ್ಲೂ ನಟಿಸಿದ್ದಾರೆ.

ಸಾವಿತ್ರಮ್ಮ ಧಾರವಾಹಿ ತಂತ್ರಜ್ಞರ ಜೊತೆ ಚಂದನ್ ಗೆ ಕಿರಿಕ್ ಆಗಿದೆ. ಈ  ವೇಳೆ ಕ್ಯಾಮರಾ ಮ್ಯಾನ್ ಚಂದನ್ ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಕೆಲವರು ಚಂದನ್ ಪರ ನಿಂತರೆ ತಂತ್ರಜ್ಞರೆಲ್ಲರೂ ಚಂದನ್ ಮೇಲೆ ಹರಿಹಾಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಬಗ್ಗೆ ಸ್ವತಃ ಚಂದನ್ ಸ್ಪಷ್ಟನೆ ನೀಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಳಿಪಟ 2 ಟ್ರೈಲರ್ ಲಾಂಚ್ ವೇಳೆ ಕುಣಿದು ಕುಪ್ಪಳಿಸಿದ ಶಿವಣ್ಣ, ಉಪೇಂದ್ರ ಭರ್ಜರಿ