Publish Date: Thu, 28 Jul 2022 (11:00 IST)
Updated Date: Thu, 28 Jul 2022 (09:33 IST)
ಲಕ್ನೋ: ಅಕ್ರಮ ಸಂಬಂಧ ಮುಂದುವರಿಸಲೊಪ್ಪದ 19 ವರ್ಷದ ಯುವತಿಯನ್ನು ಬಾವನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಒಂದು ವರ್ಷದ ಹಿಂದೆ ಯುವತಿ ಜೊತೆ ಆರೋಪಿ ಅಕ್ರಮ ಸಂಬಂಧ ಹೊಂದಿದ್ದ. ವಿವಾಹಿತೆಯಾಗಿದ್ದ ಯುವತಿಯ ಗಂಡ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಇಬ್ಬರ ಲವ್ವಿ ಡವ್ವಿ ನಡೆದಿತ್ತು.
ಆದರೆ ಇದೀಗ ಯುವತಿ ಅಕ್ರಮ ಸಂಬಂಧ ಮುಂದುವರಿಸಲೊಪ್ಪಿರಲಿಲ್ಲ. ಹೀಗಾಗಿ ರೊಚ್ಚಿಗೆದ್ದ ಆರೋಪಿ ತನ್ನ ಸಹಚರರೊಂದಿಗೆ ಸೇರಿಕೊಂಡು ದನಕ್ಕೆ ಮೇವು ತರಲು ಬಯಲು ಪ್ರದೇಶಕ್ಕೆ ಬಂದಿದ್ದ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದೀಗ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.