Publish Date: Wed, 27 Jul 2022 (16:34 IST)
Updated Date: Wed, 27 Jul 2022 (16:35 IST)
ಬೆಳ್ಳಾರೆಯಲ್ಲಿ ಅಂಗಡಿ ಬಾಗಿಲು ಮುಚ್ಚುವಾಗ ರಾತ್ರಿ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿ ಪ್ರವೀಣ್ ರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಹತ್ಯೆಗೂ ಈ ಮೊದಲು ಉದಯಪುರದಲ್ಲಿ ನಡೆದಿದ್ದ ಟೈಲರ್ ಕನ್ನಯ್ಯಲಾಲ್ ಕೊಲೆಗೂ ಕನೆಕ್ಷನ್ ಇದೆ ಎನ್ನಲಾಗುತ್ತಿದೆ.
ನೂಪುರ್ ಶರ್ಮಾ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಮತಾಂಧರಿಂದ ಕೊಲೆಗೀಡಾಗಿದ್ದ ಕನ್ನಯ್ಯಲಾಲ್ ಪರವಾಗಿ ಪ್ರವೀಣ್ ಫೇಸ್ ಬುಕ್ ನಲ್ಲಿ ಹಲವು ಪೋಸ್ಟ್ ಮಾಡಿದ್ದರು. ಇದೇ ಕಾರಣಕ್ಕೆ ಪ್ರವೀಣ್ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗುತ್ತಿದೆ.