Publish Date: Wed, 27 Jul 2022 (08:30 IST)
Updated Date: Wed, 27 Jul 2022 (08:49 IST)
ಹೈದರಾಬಾದ್: ಆಸ್ತಿ ವಿಚಾರವಾಗಿ ತಂದೆಯ ಜೊತೆಗೆ ವೈಮನಸ್ಯ ಹೊಂದಿದ್ದ ಮಗ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
75 ವರ್ಷದ ತಂದೆ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದವರು, ಇದೀಗ ನಿವೃತ್ತಿಯಾದ ಮೇಲೆ ರೆಸ್ಟೋರೆಂಟ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು.
ಇದೀಗ ಆಸ್ತಿ ವಿಚಾರವಾಗಿ ತಂದೆ-ಮಗನ ನಡುವೆ ವಯಮನಸ್ಯ ಬಂದಿದ್ದು, ಮಗನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.