Select Your Language

Notifications

webdunia
webdunia
webdunia
webdunia

ಮೊಬೈಲ್ ಕಳ್ಳತನವಾದರೆ ಎಫ್.ಐ.ಆರ್ ಕಡ್ಡಾಯ...!!!

ಮೊಬೈಲ್ ಕಳ್ಳತನವಾದರೆ  ಎಫ್.ಐ.ಆರ್ ಕಡ್ಡಾಯ...!!!
ಬೆಂಗಳೂರು , ಮಂಗಳವಾರ, 26 ಜುಲೈ 2022 (20:27 IST)
ನಗರದಲ್ಲಿ ರಾಬರಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ನಗರ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.
 
ಪೊಲೀಸ್ ಠಾಣೆಗೆ ಮೊಬೈಲ್ ಕದ್ದಿರುವ ಬಗ್ಗೆ ದೂರು ಕೊಡಲು ಬಂದರೆ ಕಡ್ಡಾಯವಾಗಿ ಎಫ್‌ಐಆರ್ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಖಡಕ್ ಸೂಚನೆ ನೀಡಿದ್ದಾರೆ.
 
ಮೊಬೈಲ್ ರಾಬರಿ ನಡೆದರೆ ಎಫ್‌ಐಆರ್ ಕಡ್ಡಾಯ: ಬೆಂಗಳೂರು ಪೊಲೀಸ್​ ಕಮಿಷನರ್ ಖಡಕ್ ಸೂಚನೆ
ಈ ಬಗ್ಗೆ ವಾರ್ಷಿಕ ಸಭೆಯಲ್ಲಿ ಚರ್ಚಿಸಲಾಗಿದ್ದು, ಮೊಬೈಲ್ ಕಳೆದು ಹೋದರೆ ಇ-ಲಾಸ್ ಸಾಫ್ಟ್​​ವೇರ್​ನಲ್ಲಿ ದೂರು ನೀಡಬಹುದು. ಆದರೆ, ಮೊಬೈಲ್ ರಾಬರಿ ಮಾಡಿದರೆ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ದೂರು ನೀಡಬಹುದು. ಪೊಲೀಸರು ಇಂತಹ ಪ್ರಕರಣಗಳಲ್ಲಿ ಶೀಘ್ರವೇ ಎಫ್‌ಐಆರ್ ದಾಖಲಿಸಲೇಬೇಕು ಎಂದು ತಾಕೀತು ಮಾಡಿದರು.
 
ಇತ್ತೀಚೆಗೆ ನಗರದಲ್ಲಿ ಮೊಬೈಲ್ ರಾಬರಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಅನೇಕರು ಇ-ಲಾಸ್​ ಮುಖಾಂತರ ದೂರುಗಳು ಬರುತ್ತಿವೆ. ಆದರೆ, ಈ ರೀತಿಯ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗೆ ಸಾರ್ವಜನಿಕರು ನೇರವಾಗಿ ಬಂದ ದೂರು ನೀಡಬೇಕು. ಅಲ್ಲದೇ, ಇಂತಹ ದೂರುಗಳ ಬಗ್ಗೆ ಪೊಲೀಸ್​ ಸಿಬ್ಬಂದಿ ನಿರ್ಲಕ್ಷ್ಯ ತೋರಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಪೊಲೀಸ್​ ಆಯುಕ್ತರು ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿ ದಿಢೀರ್ ಪ್ರತ್ಯಕ್ಷ ಕುಟುಂಬಸ್ಥರು , ಜಿಲ್ಲಾಡಳಿತ ಶಾಕ್ ...!!!